ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್‌ನಲ್ಲಿ 13 ಪದಕಗಳನ್ನು ಗೆದ್ದು ವಿಶಿಷ್ಟ ಸಾಧನೆಗೈದ ದಕ್ಷಿಣ ಕನ್ನಡ ಐಕೆಎಂಎಯ ವಿದ್ಯಾರ್ಥಿಗಳು
ಹಿಮಾಚಲ ಪ್ರದೇಶದ ಸೋಲನ್ ನಗರದಲ್ಲಿ ಸೆಪ್ಟೆಂಬರ್ 22ರಿಂದ 26ರ ವರೆಗೆ ನಡೆದ ಭಾರತ ಸರ್ಕಾರದ ಮಾನ್ಯತೆಯನ್ನು ಪಡೆದ ರಾಷ್ಟ್ರಮಟ್ಟದ ಜೂನಿಯರ್ ಕಿಕ್ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ, ರಾಜ್ಯವನ್ನು ಪ್ರತಿನಿಧಿಸಿದ ಐಕೆಎಂಎ ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ಒಟ್ಟು 5 ಚಿನ್ನ, 2 ಬೆಳ್ಳಿ ಮತ್ತು 6 ಕಂಚಿನ ಪದಕಗಳು ಗಳಿಸುವ ಮೂಲಕ ಜಿಲ್ಲೆಯ ಗೌರವವನ್ನು ಹೆಚ್ಚಿಸಿದ್ದಾರೆ.
ಪದಕ ವಿಜೇತರು:
🥇ಗಗನಾ ಜೆ. ರಾವ್ – 2 ಚಿನ್ನ
🥇 ಪ್ರೇರಣ್ ಆರ್. ಕಿಲ್ಲೆ – 2 ಚಿನ್ನ
🥇 ಪ್ರೀತ್ ಕುಲಾಲ್ – 1 ಚಿನ್ನ
🥈 ದೃತಿಶ್ರೀ – 1 ಬೆಳ್ಳಿ, 🥉 1 ಕಂಚು
🥈 ಪೂರ್ವಿ ಕೆ. ಶೆಟ್ಟಿ – 1 ಬೆಳ್ಳಿ
🥉 ದುಶ್ಯಂತ್ ಎಸ್ – 2 ಕಂಚು
🥉 ತನ್ವಿಶಾ ರೈ – 2 ಕಂಚು
🥉 ರಿಧನ್ಯ ಗಾಣಿಗ – 1 ಕಂಚು
ಈ ವಿದ್ಯಾರ್ಥಿಗಳು ಸಂಸ್ಥೆಯ ಮುಖ್ಯ ಶಿಕ್ಷಕರಾದ ನಿತಿನ್ ಎನ್. ಸುವರ್ಣ ಹಾಗೂ ಹಿರಿಯ ಶಿಕ್ಷಕರಾದ ಸಂಪತ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಈ ಯಶಸ್ಸನ್ನು ಸಾಧಿಸಿದ್ದಾರೆ.
Comments
Post a Comment