ಸಿನಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದ್ದ ಕುಡ್ಲದ ಹುಡುಗ ಪೃಥ್ವಿ ಅಂಬಾರ್ ನಿರ್ದೇಶನದಲ್ಲಿ ತೆರೆ ಕಾಣಲಿರುವ ಪ್ರಥಮ ಚಿತ್ರದ ಟೈಟಲ್ ಕೊನೆಗೂ ಬಿಡುಗಡೆಗೊಂಡಿದೆ.
'ಬುಲ್ ಡಾಗ್' ಎನ್ನುವ ತುಳು ಸಿನಿಮಾ ಪೃಥ್ವಿ ಅಂಬಾರ್ ನಿರ್ದೇಶನದ ಪ್ರಥಮ ತುಳು ಚಿತ್ರವಾಗಿ ಮೂಡಿ ಬರಲಿದ್ದು, ಭಾನುವಾರ ಅಧಿಕೃತವಾಗಿ ಸಿನಿ ತಂಡ ಟೈಟಲ್ ಬಿಡುಗಡೆಗೊಳಿಸಿದೆ.
ಲಾಂಚುಲಾಲ್ ಕೆ.ಎಸ್. ನಿರ್ಮಾಣದಲ್ಲಿ ಮೂಡಿ ಬರಲಿರುವ ಬುಲ್ ಡಾಗ್ ಸಿನಿಮಾದಲ್ಲಿ ಕೋಸ್ಟಲ್‌ವುಡ್‌ನ ಹಿರಿಯ ನಟರು ಸೇರಿದಂತೆ ಭರವಸೆ ಮೂಡಿಸಿರುವ ಯುವಕರ ತಂಡ ತೆರೆ ಮೇಲೆ ಕಾಣಲಿದ್ದು, ಸಿನಿಮಾ ವಿಭಿನ್ನವಾಗಿ ಮೂಡಿ ಬರಲಿದೆ ಎನ್ನುವ ಭರವಸೆಯನ್ನು ಸಿನಿ ತಂಡ ನೀಡಿದೆ.