ಕೂಳೂರು: ರಸ್ತೆಯ ಹದಗೆಟ್ಟ ಸ್ಥಿತಿ ಮತ್ತೊಮ್ಮೆ ಬಲಿಯನ್ನು ಪಡೆದುಕೊಂಡಿದೆ. ಕೂಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದ ಮಾಧವಿ ದುರ್ಮರಣ ಹೊಂದಿದ್ದಾರೆ.
ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆಯಲ್ಲಿದ್ದ ದೊಡ್ಡ ಗುಂಡಿಗೆ ಬಿದ್ದ ಪರಿಣಾಮ, ಹಿಂಬದಿಯಿಂದ ಬಂದ ಮೀನಿನ ಲಾರಿ ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಕೂಟರ್ ನಿಯಂತ್ರಣ ತಪ್ಪಿದ ಕ್ಷಣದಲ್ಲೇ ಮಾಧವಿ ರಸ್ತೆ ಮಧ್ಯೆ ಬಿದ್ದು, ಟ್ರಕ್ ಅಪ್ಪಳಿಸಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಉಂಟುಮಾಡಿದ್ದು,
ಮೂಲ್ಕಿಯಿಂದ ಪಂಪ್‌ವೆಲ್‌ವರೆಗಿನ ಹೆದ್ದಾರಿಯಲ್ಲಿ ಅನೇಕ ಗುಂಡಿಗಳಿದ್ದು, ಹಲವು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ಮುಂದುವರಿದಿದೆ. “ಮುಂದಿನ ದಿನಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಇನ್ನೂ ಹೆಚ್ಚು ಜನರ ಜೀವ ಹಾನಿಯಾಗಬಹುದು” ಎಂದು ಜನರು ಎಚ್ಚರಿಸಿದ್ದಾರೆ.