ಮಂಗಳೂರು, ಸೆ.26: ಆದಿ ಕ್ಷೇತ್ರ ಜಾರ ಶ್ರೀ ಜಾರಂದಾಯ ದೈವಸ್ಥಾನ, ಜಾರ ಮೂಡುಶೆಡ್ಡೆಯಲ್ಲಿ ನೂತನ ಕೊಡಿ ಮರದ ಭವ್ಯ ಮೆರವಣಿಗೆಯನ್ನು ಸೆಪ್ಟೆಂಬರ್ 27, ಶನಿವಾರ ಸಂಜೆ 5 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ.
ಶ್ರೀ ರಾಮ ಭಜನಾ ಮಂದಿರ, ನಿಸರ್ಗ ಧಾಮದಿಂದ ಆರಂಭವಾಗುವ ಈ ಮೆರವಣಿಗೆ ಜಾರ ದೈವಸ್ಥಾನದವರೆಗೆ ಸಾಗಲಿದೆ. ಸತ್ಯನಾಥ ಸೇವಾ ಬಳಗ ಜಾರ ಅವರ ಸಹಕಾರದಲ್ಲಿ ನಡೆಯುವ ಈ ಮೆರವಣಿಗೆಯಲ್ಲಿ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.
ಜತ್ತಿ ಪೂಜಾರಿ ಮತ್ತು ಜಾರಮನೆ ಕುಟುಂಬಸ್ಥರು ಹಾಗೂ ಜಾರಂದಾಯ ಸೇವಾ ಸಮಿತಿ ವತಿಯಿಂದ “ದೈವದ ಕೃಪೆಗೆ ಪಾತ್ರರಾಗಲು ಎಲ್ಲರೂ ಭಕ್ತಿಭಾವದಿಂದ ಪಾಲ್ಗೊಳ್ಳಬೇಕು” ಎಂದು ಕೋರಲಾಗಿದೆ.