Top News

'ನಮ್ಮ ರಾಜಧಾನಿ ಬೆಂಗಳೂರಲ್ಲಿ ಮಂಗಳೂರು ಜಾನಪದ ವೈಭವ' ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಬಂಟ್ವಾಳ, ಸೆ.25 : ವೈಟ್ ಲೋಟಸ್ ಫೌಂಡೇಷನ್ ಹಾಗೂ ಕರ್ನಾಟಕ ಜಾನಪದ ಪರಿಷತ್‌ ಬೆಂಗಳೂರು ಇವರ ಸಹಯೋಗದಲ್ಲಿ “ನಮ್ಮ ರಾಜಧಾನಿ ಬೆಂಗಳೂರಲ್ಲಿ ಮಂಗಳೂರು ಜಾನಪದ ವೈಭವ” ಕಾರ್ಯಕ್ರಮ ನಡೆಯಲಿದ್ದು, ಅದರ ಪೋಸ್ಟರ್‌/ವಿಜ್ಞಾಪನೆಯನ್ನು ಗುರುವಾರ ಪೊಳಲಿ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಬೋರಲಿಂಗಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ದೇವಸ್ಥಾನದ ಅರ್ಚಕ ಶ್ರೀರಾಮ್ ಭಟ್ ಆಶೀರ್ವಚನ ಮಾಡಿದರು.

ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಪಮ್ಮಿ ಕೊಡಿಯಾಲ್ ಬೈಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್, ಉಪಾಧ್ಯಕ್ಷ ಟಿಪೇಶ್ ಅಮೀನ್ ಅದ್ಯಪಾಡಿ, ಸಂಚಾಲಕ ರಾಜೇಶ್ ಆಳ್ವ, ಬಂಟ್ವಾಳ ತಾಲೂಕು ಅಧ್ಯಕ್ಷೆ ಪ್ರಮಿಳಾ ಸಾಯಿಪ್ರಿಯ ಮಾಣೂರು, ಶಿವಪ್ರಸಾದ್ ಕೊಕ್ಕಡ, ತಾಲೂಕು ಅಧ್ಯಕ್ಷರು ಚಂಚಲ ತೇಜೋಮಯ, ಪದ್ಮಶ್ರೀ ಭಟ್, ಗಿರಿಜ ಬೋರಲಿಂಗಯ್ಯ, ನಯನ ಪಮ್ಮಿ ಕೊಡಿಯಾಲ್ ಬೈಲ್, ತಾರಾನಾಥ ಕೊಟ್ಟಾರಿ, ತುಕರಾಮ ಪೂಜಾರಿ, ಹರೀಶ್ ಶೆಟ್ಟಿ, ಲೀಗಲ್ ಅಡ್ವೈಸರ್ ಸಂದೀಪ್ ಶೆಟ್ಟಿ ಹಾಗೂ ಭಜನಾ ತಂಡದ ಸದಸ್ಯರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Post a Comment

Previous Post Next Post