ನಮ್ಮ ವಾಟ್ಸಾಪ್ ಗುಂಪು ಸೇರಲು ಕ್ಲಿಕ್ ಮಾಡಿ

ಮಂಗಳೂರು : ಸೆ.15 ರಂದು ಕದ್ರಿ ಕ್ರಿಕೆಟರ್ಸ್‌ನಿಂದ 16 ನೇ ವರ್ಷದ ‘ಸ್ಟಾರ್ ನೈಟ್-’ ಕಾರ್ಯಕ್ರಮ...!


ಮಂಗಳೂರು
: ಕದ್ರಿಕಾ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಂಗ ಸಂಸ್ಥೆಯಾದ ಕದ್ರಿ ಕ್ರಿಕೆಟರ್ಸ್‌ (ರಿ) ವತಿಯಿಂದ ಹದಿನಾರನೇ ವರ್ಷದ ಕದ್ರಿ ಸ್ಟಾರ್ ನೈಟ್ ಕಾರ್ಯಕ್ರಮವು ಸೆಪ್ಟೆಂಬರ್ 15ರಂದು (ಸೋಮವಾರ) ಸಂಜೆ 6 ಗಂಟೆಗೆ ಕದ್ರಿ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕದ್ರಿ ಮೊಸರುಕುಡಿಕೆ ಉತ್ಸವದ ಅಂಗವಾಗಿ ಆಯೋಜಿಸಲಾಗಿದೆ.

ಸಂಸ್ಥೆಯ ಅಧ್ಯಕ್ಷ ಕದ್ರಿ ಮನೋಹರ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಸ್ಟಾರ್ ನೈಟ್‌ನಲ್ಲಿ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್, ಕನ್ನಡ ಚಿತ್ರ ನಟಿ ನಿಮಿಕ ರತ್ನಾಕರ್, ಹಿನ್ನೆಲೆ ಗಾಯಕರು ಶಶಾಂಕ್ ಶೇಷಗಿರಿ, ಅನಿರುದ್ಧ ಶಾಸ್ತ್ರಿ, ಜೀ ಸರಿಗಮಪ ಜೂರಿ ಸದಸ್ಯೆ ಶ್ರುತಿ ಪ್ರಹ್ಲಾದ್, ಬಹುಭಾಷಾ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಗಾಯಕ ಯಶವಂತ್ ಎಂ.ಜಿ., ನಟ ರೂಪೇಶ್ ಶೆಟ್ಟಿ, ನೃತ್ಯ ಕಲಾವಿದೆ ದೀಕ್ಷಾ, ಹಾಗೂ ಇತ್ತೀಚಿನ ಸು ಫುಮ್ ಸೊ ಚಿತ್ರದ ನಿರ್ದೇಶಕ ಜೆಪಿ ತೂಮಿನಾಡ್ ಸೇರಿದಂತೆ ಅನೇಕ ಕಲಾವಿದರು ತಮ್ಮ ಕಲಾಪ್ರದರ್ಶನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಅವರೊಂದಿಗೆ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಶಾಸಕರು ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಕಿಶೋರ್ ಕುಮಾರ್ ಬೊಟ್ಯಾಡಿ, ಮಂಜುನಾಥ್ ಭಂಡಾರಿ, ಉದ್ಯಮಿಗಳು ಡಾ. ಪ್ರಕಾಶ್ ಶೆಟ್ಟಿ, ಕಿಶೋರ್ ಶೆಟ್ಟಿ, ಏ.ಜಿ. ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮೊದಲಾದ ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧರಿಗೆ ಸನ್ಮಾನ ಕೂಡ ಜರುಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ರಾಘವೇಂದ್ರ ಬರವತ್ತಾಯ, ಸದಸ್ಯರಾದ ಹೇಮಾನಂದ್ ಕೊಡೈಬೈಲ್, ತಾರಾನಾಥ ಶೆಟ್ಟಿ ಕದ್ರಿ, ಶರಣ್ ಕದ್ರಿ, ಸುನಿಲ್ ಶೆಟ್ಟಿ ಕದ್ರಿ, ಪ್ರತೀಕ್ ಶೆಟ್ಟಿ ಕದ್ರಿ, ಸಂದೀಪ್ ರಾವ್, ಸಚಿನ್, ರಬಿಕ್ ರೈ ಕದ್ರಿ, ಶ್ರವಣ್ ಕದ್ರಿ, ಸಹಾನ್ ಕದ್ರಿ, ಅವಿನಾಶ್ ರೈ, ಶ್ರೀನಾಥ್ ಕದ್ರಿ ಮೊದಲಾದವರು ಉಪಸ್ಥಿತರಿದ್ದರು.
Previous Post Next Post