ಅಸ್ತ್ರ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಕಟ್ಟೆಮಾರ್ ಸಿನಿಮಾದ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ನಗರದ ಬಿಗ್‌ಸಿನಿಮಾಸ್‌ನಲ್ಲಿ ನಡೆಯಿತು.
ದೀಪ ಪ್ರಜ್ವಲನೆ ಬಳಿಕ ಮಾತನಾಡಿದ, ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಕಟ್ಟೆಮಾರ್‌ದ ಮಣ್ಣಿನ ಗಂಧಪ್ರಸಾದದ ಕಾರಣಿಕವನ್ನು ತೋರಿಸುವ ಸಿನಿಮಾ ಇದಾಗಿದ್ದು, ಇಬ್ಬರು ಯುವ ನಿರ್ದೇಶಕರು ಅಮೋಘವಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ಎಂದರು.
ಕಟ್ಟೆಮಾರ್ ಕ್ಷೇತ್ರದ ಮನೋಜ್ ಕಟ್ಟೆಮಾರ್ ಮಾತನಾಡಿ, ದೈವ ದೇವರ ಅನುಗ್ರಹದ ಕುರಿತಾಗಿ ಕಥೆಯನ್ನು ಹೆಣೆದಿದ್ದಾರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ನವೀನ್ ಡಿ ಪಡೀಲ್, ಪ್ರಕಾಶ್ ಪಾಂಡೇಶ್ವರ, ಕಿರಣ್ ಕುಮಾರ್ ಕೋಡಿಕಲ್, ರವಿ ರೈ ಕಳಸ, ಜೆಪಿ ತುಮ್ಮಿನಾಡ್, ಲಂಚುಲಾಲ್ ಕೆ.ಎಸ್., ಶ್ರೀಧರನ್, ರೇಖಾ, ಸ್ವರಾಜ್ ಶೆಟ್ಟಿ, ನಮಿತಾ, ಜ್ಯೋತೀಷ್ ಶೆಟ್ಟಿ, ಅರ್ಜುನ್ ದೇವ್, ನಿರ್ದೇಶಕರಾದ ಸಚಿನ್ ಕಟ್ಲ, ರಕ್ಷಿತ್ ಗಾಣಿಗ, ರೂಪಶ್ರೀ ವರ್ಕಾಡಿ ಮೊದಲಾದವರು ಇದ್ದರು.
Post a Comment