Top News

ಕಾಸರಗೋಡು ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ 20ನೇ ಉರೂಸ್ ಮುಬಾರಕ್ ಹಾಗೂ ಸನ್ನದುದಾನ ಸಮ್ಮೇಳನದ ಪೂರ್ವಭಾವಿ ಸಭೆ ; ಯೋಜನಾ ಸಮಿತಿಯ ರಚನೆ

ಕಾಸರಗೋಡ್: ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ಸಾರಥಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ 20ನೇ ಉರೂಸ್ ಮುಬಾರಕ್ ಹಾಗೂ ಸನದು ದಾನ ಸಮ್ಮೇಳನವು 2026ರ ಜನವರಿ 28, 29, 30 ಮತ್ತು 31ರಂದು ವಿಜೃಂಭಣೆಯಿಂದ ನಡೆಯಲಿದೆ.

ಈ ಮಹೋತ್ಸವದ ಪ್ರಚಾರಾರ್ಥವಾಗಿ ಕರ್ನಾಟಕದ 10 ಕೇಂದ್ರಗಳಲ್ಲಿ ಸಮಾವೇಶಗಳು, 500 ಹಿಮಮಿಗಳ ಸಮಾವೇಶ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಇದರ ಪೂರ್ವಭಾವಿ ಸಭೆ ಇಂದು ಮುಹಿಮ್ಮಾತ್‌ನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮಗಳ ಸಮನ್ವಯ ಹಾಗೂ ಕಾರ್ಯಾಚರಣೆಗೆ ಮುಹಿಮ್ಮಾತ್ ಕರ್ನಾಟಕ ರಾಜ್ಯ ಯೋಜನಾ ಸಮಿತಿಯನ್ನು ರಚಿಸಲಾಗಿದೆ.

ಚೇರ್ಮನ್ ಆಗಿ ಎಂಪಿಎಂ ಅಶ್ರಫ್ ಸ.ಅದಿ ಮಲ್ಲೂರು, ಜನರಲ್ ಕನ್ವೀನರ್ ಆಗಿ ಅಶ್ರಫ್ ಕಿನಾರ ಮಂಗಳೂರು, ಕೋಶಾಧಿಕಾರಿಯಾಗಿ ಬದ್ರುದ್ದೀನ್ ಹಾಜಿ ಬಜಪೆ, ವೈಸ್ ಚೇರ್ಮನ್ ಗಳಾಗಿ ಡಾ.ಎಂ.ಎಸ್.ಎಂ. ಝೈನೀ ಕಾಮಿಲ್, ಇಸ್‌ಹಾಕ್ ಹಾಜಿ ಬೊಳ್ಳಾಯಿ, ಕೆ.ಎಂ. ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ, ಕನ್ವೀನರ್‌ಗಳಾಗಿ ಮೆಹ್ಬೂಬ್ ಸಖಾಫಿ ಕಿನ್ಯ,  ಹಸೈನಾರ್ ಆನೆಮಹಲ್ ಸಕಲೇಶಪುರ, ಖಲೀಲ್ ಮಾಲಿಕಿ ಬೊಳಂತೂರ್, ಚೀಫ್ ಕೋ-ಆರ್ಡಿನೇಟರ್‌ಗಳಾಗಿ ಕೆ.ಕೆ.ಎಂ.ಕಾಮಿಲ್ ಸಖಾಫಿ, ಕೋ-ಆರ್ಡಿನೇಟರ್‌ಗಳಾಗಿ ಕೆ.ಕೆ. ಅಶ್ರಫ್ ಸಖಾಫಿ, ಹಿಮಮಿ, ಸುರಿಬೈಲ್, ರವೂಫ್ ಹಿಮಮಿ ಸಖಾಫಿ, ಇಬ್ರಾಹಿಂ ಸಖಾಫಿ ಪಯೊಟ್ಟ ನೇಮಕಗೊಂಡಿದ್ದಾರೆ.

Post a Comment

Previous Post Next Post