An incident of a wife pouring hot oil on her husband's head and attempting to murder him took place in Ramanagara, Machhe village, Belgaum taluk. A woman named Vaishali Patil (48), a resident of Ramanagara, showed cruelty and poured hot oil on her husband Subhash Patil (55).
ಪತ್ನಿಯೇ ಪತಿಯ ತಲೆ ಮೇಲೆ ಕಾದ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಘಟನೆ ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ರಾಮನಗರದಲ್ಲಿ ನಡೆದಿದೆ. ರಾಮನಗರದ ನಿವಾಸಿ ವೈಶಾಲಿ ಪಾಟೀಲ್ (48) ಎಂಬ ಮಹಿಳೆ ಕ್ರೌರ್ಯ ಮೆರೆದಿದ್ದು, ಪತಿ ಸುಭಾಷ ಪಾಟೀಲ್(55) ಮೇಲೆ ಕಾದ ಎಣ್ಣೆ ಸುರಿದಿದ್ದಾಳೆ.ಗಂಭೀರ ಗಾಯಗೊಂಡ ಸುಭಾಷನ್ನು ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 60ರಷ್ಟು ಸುಟ್ಟ ಗಾಯಗಳಾಗಿದ್ದು, ಹೆಂಡತಿ ಕ್ರೌರ್ಯಕ್ಕೆ ಗಂಡ ಸುಭಾಷ ಪಾಟೀಲ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಪರಸ್ರ್ತೀಯೊಂದಿಗೆ ಗಂಡ ಸಂಬಂಧ ಹೊಂದಿದ್ದಾನೆಂದು ಸಂಶಯ ಪಡುತ್ತಿದ್ದು ಇದೇ ಕಾರಣಕ್ಕೆ ಹಲವಾರು ಬಾರಿ ಮನೆಯಲ್ಲಿ ಗಂಡ-ಹೆಂಡತಿ ಇಬ್ಬರ ನಡುವೆಯೂ ಗಲಾಟೆ ಉಂಟಾಗಿತ್ತು. ತಲೆಯ ಮೇಲೆ ಎಣ್ಣೆ ಹಾಕಲು ಪತ್ನಿಯ ಸಂಶಯವೇ ಕಾರಣ ಎನ್ನಲಾಗಿದೆ.
ಕಳೆದ ಇಪ್ಪತ್ತು ವರ್ಷಗಳಿಂದ ಸುಭಾಷ್ ಗ್ಯಾಸ್ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದು ಎಂದಿನಂತೆ ಗ್ಯಾಸ್ ಸಪ್ಲೈ ಕೆಲಸ ಮುಗಿಸಿ ಮನೆಯಲ್ಲಿ ಕುಳಿತಾಗ ಹೆಂಡತಿ ಕಾದ ಎಣ್ಣೆಯನ್ನೇ ತಲೆಯ ಮೇಲೆ ಹಾಕಿದ್ದಾಳೆ. ಗಾಯಗೊಂಡ ಸುಭಾಷನನ್ನು ಸದ್ಯ ಸ್ಥಳೀಯರ ಸಹಾಯದೊಂದಿಗೆ ಬೀಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಬೀಮ್ಸ್ ವೈದ್ಯರ ಸಲಹೆ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Post a Comment