Top News

ಹಾಸನಾಂಬ ದೇವಾಲಯದ ಕೆಂಡ ಹಾಯುವ ವಿಧಿ ವಿಜ್ಞಾನಾಧಾರಿತ ಪ್ರಕ್ರಿಯೆ, ದೈವಿಕ ಶಕ್ತಿ ಅಲ್ಲ : ಪ್ರೊ.ನರೇಂದ್ರ ನಾಯಕ್

ಹಾಸನ : ಹಾಸನಾಂಬ ದೇವಾಲಯದ ಕೆಂಡೋತ್ಸವದಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ ಕೆಂಡದ ಮೇಲೆ ನಡೆದ ವಿಡಿಯೋ ವೈರಲ್‌ ಆಗಿದ್ದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ವಿಚಾರವಾದಿಗಳ ಸಂಘದ ರಾಜ್ಯಾಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಅವರು ಹಾಸನ ಜಿಲ್ಲಾಧಿಕಾರಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಅವರು “ಕೆಂಡದ ಮೇಲೆ ನಡೆಯುವ ವಿಧಿಯು ನಂಬಿಕೆ ಅಥವಾ ತಾಳ್ಮೆಯ ಪರೀಕ್ಷೆಯಲ್ಲ, ಅದು ‘Leidenfrost Effect’ ಎನ್ನುವ ಭೌತಶಾಸ್ತ್ರೀಯ ಪರಿಣಾಮದಿಂದ ಸಾಧ್ಯವಾಗುತ್ತದೆ” ಎಂದು ತಿಳಿಸಿದ್ದಾರೆ.

ಹಾಗೆಯೇ ಈ ವಿಧಿ ‘ಕಪಟಾಚರಣೆ ಮತ್ತು ಬ್ಲ್ಯಾಕ್‌ಮ್ಯಾಜಿಕ್ ನಿಷೇಧ ಕಾಯ್ದೆ, 2017’ ಅಡಿಯಲ್ಲಿ ಅಪರಾಧ ಕಾರ್ಯವಾಗಬಹುದು ಎಂದೂ ಎಚ್ಚರಿಸಿದ್ದಾರೆ.
ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ಹಾಸನದಲ್ಲಿ ಧರ್ಮರಹಿತ ಕೆಂಡ ಹಾಯುವ ಪ್ರಾತ್ಯಕ್ಷಿಕೆ ಆಯೋಜಿಸಲು ಜಿಲ್ಲಾಧಿಕಾರಿ ಸಹಕಾರ ನೀಡಬೇಕೆಂದೂ ಅವರು ಮನವಿ ಮಾಡಿದ್ದಾರೆ.

Post a Comment

Previous Post Next Post