ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಗಣಿತಶಾಸ್ತ್ರ ಅಧ್ಯಾಪಕರುಗಳ ಸಂಘದ (FORMAT) ವತಿಯಿಂದ ನಿವೃತ್ತ ಉಪನ್ಯಾಸಕರಿಗೆ ಸನ್ಮಾನ ಹಾಗೂ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಇತ್ತೀಚೆಗೆ ಯೂನಿವರ್ಸಿಟಿ ಕಾಲೇಜ್‌ನ ಸಭಾಂಗಣದಲ್ಲಿ ನಡೆಯಿತು
ಈ ಸಂದರ್ಭ ನಿವೃತ್ತ ಗಣಿತ ಉಪನ್ಯಾಸಕರಾದ ಸರಸ್ವತಿ ಟಿ ಹಾಗೂ ಜೆಫ್ರಿ ರೋಡ್ರಿಗಸ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಂಘದ ಸಭೆಯು ಕೂಡ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಬಲ್ಮಠ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಸವಿತಾ, ಕಾರ್ಯದರ್ಶಿಯಾಗಿ ಅಜ್ಜರಕಾಡು ಪದವಿ ಕಾಲೇಜ್‌ನ ಡಾ. ಶ್ರೀಮತಿ ಅಡಿಗ ಹಾಗೂ ಖಜಾಂಚಿಯಾಗಿ ಕೆನರಾ ಕಾಲೇಜು, ಮಂಗಳೂರಿನ ಕೀರ್ತಿ ಇವರು ಆಯ್ಕೆಯಾದರು.
Post a Comment