Top News

ಕ್ರೀಡಾ ಸಾಧಕರಿಗೆ ಸಂಬಂಧಪಟ್ಟ ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ ; ಅ.28 ಕೊನೆಯ ದಿನ

ಮಂಗಳೂರು : ಕೇಂದ್ರ  ಯುವ ಸಬಲೀಕರಣ ಮತ್ತು ಕ್ರೀಡಾ ಮಂತ್ರಾಲಯದ  ಕ್ರೀಡಾ ಇಲಾಖೆಯು  ಕ್ರೀಡಾ ಸಾಧನೆಗೆ  ಸಂಬಂಧಪಟ್ಟಂತೆ  ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ  ಗಣನೀಯ ಸಾಧನೆ ಮಾಡಿರುವ ಸಾಧಕರಿಗೆ ವಿವಿಧ  ಪ್ರಶಸ್ತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ

ಅರ್ಜುನ ಪ್ರಶಸ್ತಿ, ರಾಷ್ಟ್ರೀಯ ಕ್ರೀಡಾ ಪೋಷಕ ಪ್ರಶಸ್ತಿ, ದ್ರೋಣಾಚಾರ್ಯ  ಪ್ರಶಸ್ತಿ, ಧ್ಯಾನ್‍ಚಂದ್ ಖೇಲ್ ರತ್ನ ಪ್ರಶಸ್ತಿಗಳಿಗೆ  ವೆಬ್‍ಸೈಟ್  www.dbtyas.sports.gov    ಮೂಲಕ ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸಲು ಕೊನೆಯ ದಿನ ಅ.28 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ಇಮೇಲ್ Sportsawards-moyas@gov.in, ph 011-23387432 ಅಥವಾ ಟೋಲ್ ಫ್ರೀ ನಂ: 1800-202-5155   ಸಂಪರ್ಕಿಸಬಹುದು ಎಂದು  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

Previous Post Next Post