ನಮ್ಮ ವಾಟ್ಸಾಪ್ ಗುಂಪು ಸೇರಲು ಕ್ಲಿಕ್ ಮಾಡಿ

Asia Cup Cricket | ಬಾಂಗ್ಲವನ್ನು 41ರನ್‌ಗಳಿಂದ ಸೋಲಿಸಿ ಏಷ್ಯಾ ಕಪ್ ಫೈನಲ್‌ಗೆ ಲಗ್ಗೆಯಿಟ್ಟ ಭಾರತ


ದುಬೈ :  ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಮ್‌ನಲ್ಲಿ ಬುಧವಾರ ನಡೆದ ಏಷ್ಯ ಕಪ್ ಕ್ರಿಕೆಟ್ ಟೂರ್ನಿಯ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭಾರತವು 41 ರನ್‌ಗಳ ಜಯ ಸಾಧಿಸಿತು. ಈ ಮೂಲಕ ಫೈನಲ್ ಪ್ರವೇಶಿಸಿದ್ದು, ಪಾಕಿಸ್ತಾನ ಹಾಗೂ ಬಾಂಗ್ಲದೇಶ ನಡುವಿನ ಪಂದ್ಯದಲ್ಲಿ ವಿಜೇತ ತಂಡವು ಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಭಾರತ 20 ಓವರ್‌ಗಳಲ್ಲಿ 168 ರನ್ ಗಳಿಸಿತು. ಈ ಗೌರವಯುತ ಮೊತ್ತವನ್ನು ಬೆನ್ನತ್ತಿದ್ದ ಬಾಂಗ್ಲದೇಶ ತನ್ನೆಲ್ಲ ವಿಕೆಟ್‌‌‌ಗಳನ್ನು ಕಳೆದುಕೊಂಡು ಕೇವಲ 127ರನ್ ಗಳಿಸಲು ಶಕ್ತವಾಯಿತು. 

ಭಾರತದ ಪರ ಅಭಿಷೇಕ್ ಶರ್ಮ 75(37) ರನ್ ಗಳಿಸದರು ಹಾಗೂ ಬೌಲಿಂಗ್‌ನಲ್ಲಿ ಕುಲದೀಪ್ ಯಾದವ್ 3 ವಿಕೆಟ್‌ಗಳನ್ನು ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬಾಂಗ್ಲಾ ಪರ ಸೈಫ್ ಹಸನ್ ಜವಾಬ್ದಾರಿಯುತ 69 ರನ್‌ಗಳನ್ನು ಗಳಿಸಿದರೂ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

Asia Cup Cricket India #Cricket #India #AsiaCup
Previous Post Next Post