ನಮ್ಮ ವಾಟ್ಸಾಪ್ ಗುಂಪು ಸೇರಲು ಕ್ಲಿಕ್ ಮಾಡಿ

ಸಾಮಾಜಿಕ ಜಾಲತಾಣದಲ್ಲಿ ಕೋಮು ವೈಮನಸ್ಸು ಉದ್ದೇಶಿತ ಪೋಸ್ಟ್ ; ವಸಂತ್ ಗಿಳಿಯಾರ್ ವಿರುದ್ಧ ಪ್ರಕರಣ ದಾಖಲು

ಕೋಮುದ್ವೇಷ ಪ್ರೇರೇಪಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಹಿನ್ನೆಲೆಯಲ್ಲಿ ವಸಂತ್ ಗಿಳಿಯಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

09-08-2025 ರಂದು ಮಧ್ಯಾಹ್ನ, ಬೆಳ್ತಂಗಡಿ ನಿವಾಸಿ ಶೇಖರ ಲಾಯಿಲ (43) ಅವರು ತಮ್ಮ ಮೊಬೈಲ್‌ ಪರಿಶೀಲಿಸುವಾಗ, ವಸಂತ ಗಿಳಿಯಾರ್ ಎಂಬ ವ್ಯಕ್ತಿ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಧರ್ಮ ಹಾಗೂ ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡುವ ರೀತಿಯ ಸಂದೇಶಗಳನ್ನು ಹಂಚಿರುವುದು ಗಮನಕ್ಕೆ ಬಂದಿದೆ.

ಈ ಕುರಿತು ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎಂದು ಶೇಖರ ಲಾಯಿಲ ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಅಕ್ರ. 84/2025ರಂತೆ, ಕಲಂ 196(1)(ಎ), 353(2) ಬಿ.ಎನ್.ಎಸ್. 2023 ಪ್ರಕಾರ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ.
Previous Post Next Post