Top News

ಮಂಗಳೂರು : ತುಳು ಪರಿಷತ್ ವತಿಯಿಂದ ಶಕ್ತಿನಗರದಲ್ಲಿ ಆಟಿದ ಕೂಟ ಕಾರ್ಯಕ್ರಮ


ಮಂಗಳೂರು ತುಳು ಪರಿಷತ್ ವತಿಯಿಂದ ಆಟಿದ ಕೂಟ ಕಾರ್ಯಕ್ರಮ ಇತ್ತೀಚೆಗೆ ಶಕ್ತಿನಗರದಲ್ಲಿ ನಡೆಯಿತು. ಸುರತ್ಕಲ್ ಗೋವಿಂದ ದಾಸ್ ಪದವಿ ಕಾಲೇಜು ನಿವೃತ್ತ ಪ್ರಾಂಶುಪಾಲ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು.

ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಅಧ್ಯಕ್ಷತೆ ವಹಿಸಿ  ಮಾತನಾಡಿ, ಆಟಿ ತಿಂಗಳು ತುಂಬಾ ಕಷ್ಟದ ಸಮಯವಾಗಿತ್ತು. ಕೃಷಿ ಬದುಕಿನ ಮಧ್ಯೆ ಬಡತನದ ಮಧ್ಯೆಯೂ ಜನರೂ ಸಂಸ್ಕಾರ ಯುತ ಜೀವನ ನಡೆಸುತ್ತಿದ್ದರು ಎಂದರು.
ತುಳು ಪರಿಷತ್ ಮಂಗಳೂರು ಗೌರವಧ್ಯಕ್ಷ ಡಾ.ಪ್ರಭಾಕರ್ ನಿರುಮಾರ್ಗ ಮಾತನಾಡಿ ತುಳು ಭಾಷೆ ಮತ್ತು ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ರಾಜಕೀಯ ರಹಿತವಾಗಿ ಕೆಲಸ ಮಾಡಬೇಕು ಎಂದರು.

ಸುಧಾ ನಾಗೇಶ್, ಚಂದ್ರಕಲಾ ರಾವ್,  ಸುಮತಿ ಹೆಗ್ಡೆ, ಶಾಲಿನಿ ರೈ, ಅಮಿತಾ ಅಶ್ವಿನ್ ಉಳ್ಳಾಲ್, ವಿನುತಾ, ಶ್ರೀನಿವಾಸ್, ರಾಕೇಶ್ ಕುಂದರ್, ರಮೇಶ್ ಮಂಚಕಲ್, ಶಾರದಾ ಬಾರ್ಕುರೂ, ವಿನಯ್, ದುರ್ಗಾ ಪ್ರಸಾದ್, ಮೀರಾ ಶೆಟ್ಟಿ, ವನಿತಾ, ನ್ಯಾನ್ಸಿ ನೋರೋನ್ಹ, ಆಶಾ,ಜ್ಯೋತಿ,  ಸನ್ನಿಧಿ, ಉಪಸ್ಥಿತರಿದ್ದರು.

ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Post a Comment

Previous Post Next Post