ಮಂಗಳೂರು : ಸೋಶಿಯಲ್ ಮೀಡಿಯಾವನ್ನು ಚೆನ್ನಾಗಿ ಉಪಯೋಗಿಸಿಕೊಂಡರೆ ಪಾಪರ್‌ಇಂದ ಸೂಪರ್ ಸ್ಟಾರ್ ಆಗಲು ಸಾಧ್ಯವಿದೆ ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ಅದಕ್ಕೆ ಪೂರಕ ಎನ್ನುವಂತೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಮಲ್ಲಿಕಟ್ಟೆ ರೋಡ್‌ನಲ್ಲಿರುವ ಕದ್ರಿ ಕೆಫೆಯ ಸೆಕ್ಯೂರಿಟಿ ಗಾರ್ಡ್ ಡ್ಯಾನ್ಸ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ವಿಡಿಯೋ ಸಖತ್ ವೈರಲ್ ಆಗಿದ್ದು ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಡ್ಯಾನ್ಸ್ ಮೂಲಕ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ಅಂಕಿತ್ ಶರ್ಮ ಮೂಲತಃ ಉತ್ತರ ಪ್ರದೇಶದವರಾಗಿದ್ದು, ಮಂಗಳೂರಿನಲ್ಲಿ ಕಳೆದ ಐದು ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್video ಆಗಿ ಕೆಲಸ ಮಾಡುತ್ತಿದ್ದು, ಕದ್ರಿ ಕೆಫೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ದುಡಿಯುತ್ತಿದ್ದು, ಇತ್ತೀಚೆಗೆ ಡ್ಯಾನ್ಸ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು, ಬಹಳಷ್ಟು ಜನರನ್ನು ತಲುಪಿದ್ದು, ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೊಟೇಲ್ ಸಿಬ್ಬಂದಿ, ಮಾಲೀಕರೂ ಕೂಡ ಪ್ರೋತ್ಸಾಹವನ್ನು ನೀಡುತ್ತಿದ್ದು, ಇದು ಅಂಕಿತ್ ಉತ್ಸಾಹಕ್ಕೆ ಪುಷ್ಟಿಯನ್ನು ನೀಡಿದೆ.