ಮಂಗಳೂರು: ಅಗಲಿದ ಖ್ಯಾತ ಕಲಾವಿದ ಸೈಯದ್ ಆಸಿಫ್ ಅಲಿ ಅವರ ಸ್ಮರಣಾರ್ಥ ‘ಕಲಾಸ್ಮೃತಿ’ ಎಂಬ ಒಂದು ದಿನದ ಚಿತ್ರಕಲಾ ಶಿಬಿರ ಹಾಗೂ ಕಲಾಕೃತಿ ಪ್ರದರ್ಶನ ಆಗಸ್ಟ್ 15ರಂದು ಮಂಗಳೂರಿನ ರಿವರ್ ರೂಸ್ಟ್ ರೆಸಾರ್ಟ್‌ನಲ್ಲಿ ನಡೆಯಿತು.
ಕರಾವಳಿ ಚಿತ್ರಕಲಾ ಚಾವಡಿ (ರಿ.), ಮಂಗಳೂರು ವತಿಯಿಂದ ರಿವರ್ ರೂಸ್ಟ್ ರೆಸಾರ್ಟ್‌ನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾವಡಿಯ ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವ ವಹಿಸಿದ್ದರು. ರಿವರ್ ರೂಸ್ಟ್ ರೆಸಾರ್ಟ್‌ನ ವ್ಯವಸ್ಥಾಪಕಿ ಸಜ್ದಾ ಶೇಖ್ ಶಿಬಿರವನ್ನು ಉದ್ಘಾಟಿಸಿದರು.
ಚಾವಡಿಯ ಉಪಾಧ್ಯಕ್ಷ ಅನಂತ ಪದ್ಮನಾಭ ರಾವ್ ಹಾಗೂ ಕಾರ್ಯದರ್ಶಿ ಡಾ. ಜಯಪ್ರಕಾಶ್ ಬಿ. ಉಪಸ್ಥಿತರಿದ್ದರು. ಉಪಾಧ್ಯಕ್ಷ ಶರತ್ ಹೊಳ್ಳ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಜಯಶ್ರೀ ಶರ್ಮಾ ವಂದಿಸಿದರು. ಕಲಾವಿದ ಡಾ. ಝುಬೇರ್ ಖಾನ್ ಕುಡ್ಲ ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರಕಲಾ ಶಿಬಿರದಲ್ಲಿ ಕರಾವಳಿ ಚಿತ್ರಕಲಾ ಚಾವಡಿಯ ಸುಮಾರು 20 ಮಂದಿ ಕಲಾವಿದರು ಹಾಗೂ ಮಂಗಳೂರಿನ ಮಹಾಲಸಾ ದೃಶ್ಯಕಲಾ ಕಾಲೇಜಿನ ಐವರು ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಬಿರದ ಅಂತ್ಯದಲ್ಲಿ ಕಲಾವಿದರು ರಚಿಸಿದ ಕಲಾಕೃತಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶಿಸಲಾಯಿತು.
Post a Comment