ಅದ್ಯಪಾಡಿ: ಶ್ರೀ ಆದಿನಾಥೇಶ್ವರ ಭಜನಾ ಮಂಡಳಿಯಿಂದ ಉಚಿತ ಆಂಬುಲೆನ್ಸ್ ಸೇವೆ ; ವಿಜ್ಞಾಪನಾ ಪತ್ರ ಬಿಡುಗಡೆ

ಅದ್ಯಪಾಡಿ: ಶ್ರೀ ಆದಿನಾಥೇಶ್ವರ ಭಜನಾ ಮಂಡಳಿ, ಅದ್ಯಪಾಡಿ ಇವರ ವತಿಯಿಂದ 2027ರ ಮಾರ್ಚ್ 13ರಂದು ನಡೆಯಲಿರುವ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಉಚಿತ ಆಂಬುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದೆ.

ಈ ಮಹತ್ವದ ಸೇವಾ ಕಾರ್ಯದ ಅಂಗವಾಗಿ ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಸದಾಶಿವ ಭಟ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಶೆಟ್ಟಿ, ನಾರಾಯಣ ಪೂಜಾರಿ ಬಂಟಸಾನ, ರಾಜೀವ್ ಆಳ್ವ, ಶಿವಪ್ಪ ಬಂಗೇರ, ರೂಪೇಶ್ ಶೆಟ್ಟಿ, ಜೀವನ್ ಮಲ್ಲಿ, ಲಕ್ಷ್ಮಣ ಡಿ. ಮೂಲ್ಯ, ಸುಂದರ ಬಿ. ಬಂಗೇರ, ಭುಜಂಗ ಕುಲಾಲ್ ಹಾಗೂ ಭಜನಾ ಮಂಡಳಿಯ ಅಧ್ಯಕ್ಷ ಶೋಧನ್ ಅದ್ಯಪಾಡಿ ಉಪಸ್ಥಿತರಿದ್ದರು.

ಶ್ರೀ ಆದಿನಾಥೇಶ್ವರ ಭಜನಾ ಮಂಡಳಿಯ ಸರ್ವ ಸದಸ್ಯರು, ಊರಿನ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ಜನಪರ ಸೇವಾ ಕಾರ್ಯಕ್ಕೆ ಶುಭ ಹಾರೈಸಿದರು.

Post a Comment

Previous Post Next Post