ಕುಂಜತ್ತಬೈಲ್‌ನ ಸಾಮ್ರಾಟ್ ಕ್ರಿಕೆಟರ್ಸ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಾಗೂ ಅಭಿನಂದನಾ ಸಮಾರಂಭ

ಮಂಗಳೂರು: ಸಾಮ್ರಾಟ್ ಕ್ರಿಕೆಟರ್ಸ್ (ರಿ.) ಕುಂಜತ್ತಬೈಲ್, ಮಂಗಳೂರು ಇದರ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮವು ಕುಂಜತ್ತಬೈಲ್ ಜಂಕ್ಷನ್‌ನಲ್ಲಿ ನಡೆಯಿತು.

ಮ.ನ.ಪಾ. ನಿಕಟಪೂರ್ವ ಸದಸ್ಯರಾದ ಶರತ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಿದ್ದೀಖ್ ಜುಮಾ ಮಸ್ಜಿದ್, ಮರಕಡ ಇದರ ಅಧ್ಯಕ್ಷ ಮೈಯದ್ದಿ ಬ್ಯಾರಿ, ಕೂಳೂರು–ಕಾವೂರು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹುಸೈನ್ ರಿಯಾಝ್, ಕಾವೂರು ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ನಿರೀಕ್ಷಕ ರಾಮಣ್ಣ ಶೆಟ್ಟಿ, ಸಾಮ್ರಾಟ್ ತಂಡದ ಅಧ್ಯಕ್ಷ ನಾಸೀರ್ ಕುಂಜತ್ತಬೈಲ್, ಖವ್ವತುಲ್ ಇಸ್ಲಾಂ ಮದರಸ ಕುಳ ಇದರ ಅಧ್ಯಕ್ಷ ಮಹಮ್ಮದ್ ಚೆಯ್ಯಾಬ್ಬ ಬ್ಯಾರಿ, ಸಾಮ್ರಾಟ್ ತಂಡದ ಮಾಜಿ ನಾಯಕರಾದ ಚಂದ್ರರಾಜ ಶೆಟ್ಟಿ, ಬಿ.ಕೆ. ಮೊಹಮ್ಮದ್ ಹಾಗೂ ಶೇಕ್ ಅಬ್ದುಲ್ಲಾ, ಗಲ್ಫ್ ನೌಕರರ ಸಂಘದ ಅಧ್ಯಕ್ಷ ನಝೀರ್ ಮೊಹಿದ್ದೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸ್ಥಳೀಯರಾದ ಏಜಾಝ್ ಪಾಷ, ವಾಝಿ ಕುಂಜತ್ತಬೈಲ್ ಹಾಗೂ ಸಾಮ್ರಾಟ್ ತಂಡದ ಪದಾಧಿಕಾರಿಗಳಾದ ನೌಫಲ್, ಇಬ್ರಾಹಿಂ, ನಾಸೀರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಫಾತಿಮಾ ಝಾಕಿಯಾ, ಚೇತನಾ ಎಂ., ದರ್ಶ್ ಆರ್. ಪೂಜಾರಿ ಹಾಗೂ ಧ್ಯಾನ್ ಆರ್. ಪೂಜಾರಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.

Post a Comment

Previous Post Next Post