ಇತಿಹಾಸ ಪ್ರಸಿದ್ಧ ಮುಂಡ್ಕೂರು ಕಜೆ ಶ್ರೀ ಮಹಮ್ಮಾಯಿ ದೇವಸ್ಥಾನ (ಕುಕ್ಕುದಡಿ ಮಾರಿಗುಡಿ) ಯಲ್ಲಿ ಮಾರ್ಚ್ 10ರಂದು ಚಂಡಿಕಾ ಯಾಗ ಹಾಗೂ ಮಾರ್ಚ್ 11ರಂದು ಮಾರಿ ಪೂಜೆ ಭಕ್ತಿಭಾವದಿಂದ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ತುಳು ಭಕ್ತಿಗೀತೆ “ಕಾಡ ಕೇಪುಲ” ಶನಿವಾರ ಲೋಕಾರ್ಪಣೆಗೊಂಡಿತು.
ಮುಗ್ಧ ಮಕ್ಕಳ ಹಾಲಿನಂತಹ ನಿರ್ಮಲ ಭಕ್ತಿಗೆ ಒಲಿದ ದೇವಿಯಾಗಿ ಪ್ರಸಿದ್ಧಿಯಾದ ಮಹಮ್ಮಾಯಿ ದೇವಿಯ ಆರಾಧನೆಗಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ ಹಾಡಿಗೆ ಜಿ.ಎಸ್. ಗುರುಪುರ ಸಾಹಿತ್ಯ ರಚಿಸಿದ್ದು, ಬಹುಮುಖ ಪ್ರತಿಭೆಯ ಗಾಯಕಿ ಕುಮಾರಿ ಅದಿತಿ ಗಾಣಿಗ ಅವರು ಹಾಡಿದ್ದಾರೆ. ಐಶ್ವರ್ಯ ದೇವಾಡಿಗ ವೀಣೆಯಲ್ಲಿ ಸಾಥ್ ನೀಡಿದ್ದು, ಟೀಂ ಬನ್ವಾರಿ ತಂಡ ಈ ಗೀತೆಯನ್ನು ಅರ್ಪಿಸಿದೆ.
ಕೊಳಲು ವಾದನವನ್ನು ಸಂತೋಷ್ ವಿಟ್ಲ ನಿರ್ವಹಿಸಿದ್ದು, ನಿರ್ದೇಶನ ಮತ್ತು ಸಂಕಲನವನ್ನು ಪ್ರಸಾದ್ ಕೊಳಂಬೆ ಮಾಡಿದ್ದಾರೆ. ಸಂಗೀತ ಸಂಯೋಜನೆ ಹಾಗೂ ಮ್ಯೂಸಿಕ್ ಪ್ರೊಡಕ್ಷನ್ ಅನ್ನು ಕೆ.ಪಿ. ಮಿಲನ್ ಕುಮಾರ್ ನಿರ್ವಹಿಸಿದ್ದು, ಚಿತ್ರೀಕರಣವನ್ನು ಧೀರಜ್ ಮಾರಡ್ಕ ಮಾಡಿದ್ದಾರೆ.
Post a Comment