ಶೃಂಗೇರಿ ಶಾರದಾ ಪೀಠ ವತಿಯಿಂದ ಶಾಲಾ ಮಕ್ಕಳಿಗಾಗಿ ವಿಶೇಷ ಶೈಕ್ಷಣಿಕ ಉಪಕ್ರಮವಾಗಿ ‘ಶ್ರೀಮದ್ ರಾಮಾಯಣ ಪರೀಕ್ಷೆ - 2026’ ಆಯೋಜಿಸಲಾಗಿದೆ.
ಬೇಸಿಗೆ ರಜೆಯನ್ನು ಅರ್ಥಪೂರ್ಣವಾಗಿಸಲು ಹಾಗೂ ಮಕ್ಕಳಲ್ಲಿ ಸನಾತನ ಧರ್ಮದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ನಡೆಸಲಾಗುತ್ತಿದೆ.
ಜಗದ್ಗುರು ಶಂಕರಾಚಾರ್ಯರಾದ ಭಾರತಿ ತೀರ್ಥ ಮಹಾಸನ್ನಿಧಾನಂ ಮತ್ತು ವಿಧುಶೇಖರ ಭಾರತಿ ಸನ್ನಿಧಾನಂ ಅವರ ಆಶೀರ್ವಾದದೊಂದಿಗೆ ‘ಬಾಲ ಭಾರತಿ’ ಯೋಜನೆಯಡಿ ಈ ಪರೀಕ್ಷೆ ನಡೆಯಲಿದೆ.
ಸ್ಪರ್ಧೆಯ ವಿಭಾಗಗಳು :
ವಿದ್ಯಾರ್ಥಿಗಳ ವಯೋಮಾನದ ಆಧಾರದ ಮೇಲೆ ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ.
ಲೆವೆಲ್ 1: 4ರಿಂದ 6ನೇ ತರಗತಿ
ಲೆವೆಲ್ 2: 7ರಿಂದ 10ನೇ ತರಗತಿ
ಆಕರ್ಷಕ ಬಹುಮಾನಗಳು :
ವಿಜೇತರಿಗೆ ನಗದು ಬಹುಮಾನಗಳೊಂದಿಗೆ ಇನ್ನಷ್ಟು ಗೌರವಗಳು ಕೂಡ ಸಿಗಲಿವೆ:
ಪ್ರಥಮ ಬಹುಮಾನ – ₹50,000
ದ್ವಿತೀಯ ಬಹುಮಾನ – ₹40,000
ತೃತೀಯ ಬಹುಮಾನ – ₹30,000
ವಿಶೇಷ ಬಹುಮಾನ – ₹10,000
ಇದರ ಜೊತೆಗೆ ಟಾಪರ್‌ಗಳಿಗೆ ಶೃಂಗೇರಿ ಕ್ಷೇತ್ರಕ್ಕೆ ಪ್ರಾಯೋಜಿತ ಪ್ರವಾಸ, ಪ್ರಮಾಣಪತ್ರ, ಪದಕ, ಪುಸ್ತಕಗಳು ಮತ್ತು ಪಜಲ್‌ಗಳು ನೀಡಲಾಗುತ್ತವೆ.
ಪರೀಕ್ಷಾ ವೇಳಾಪಟ್ಟಿ
ಮೊದಲ ಹಂತ: ಮೇ 9, 2026 (ಬೆಳಗ್ಗೆ 10:00)
ಮುಂದಿನ ಹಂತಗಳು (ಕ್ವಾರ್ಟರ್, ಸೆಮಿ, ಫೈನಲ್): ಮೇ 23 ಮತ್ತು 24, 2026
ನೋಂದಣಿ ವಿಧಾನ
ಆಸಕ್ತ ವಿದ್ಯಾರ್ಥಿಗಳು ‘ಬಾಲ ಭಾರತಿ’ ಅಧಿಕೃತ ವೆಬ್‌ಸೈಟ್ baalabharati.org ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹತ್ತಿರದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡುವ ಅವಕಾಶವೂ ಇದೆ.
ಪೋಸ್ಟರ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ನೋಂದಣಿ ಸಾಧ್ಯ.
ಈ ಪರೀಕ್ಷೆ ಮಕ್ಕಳಿಗೆ ಜ್ಞಾನವನ್ನು ವಿಸ್ತರಿಸುವ ಜೊತೆಗೆ ಧಾರ್ಮಿಕ ಸಾಹಿತ್ಯದತ್ತ ಆಸಕ್ತಿ ಬೆಳೆಸುವ ಉತ್ತಮ ವೇದಿಕೆಯಾಗಲಿದೆ.
Post a Comment