Top News

ಸಂಸ್ಕೃತ ಎಂ.ಎ.ಯಲ್ಲಿ ಪ್ರಥಮ ರ‍್ಯಾಂಕ್: ಯಕ್ಷಗಾನ ಕಲಾವಿದೆ ಶ್ರಾವ್ಯ ತಳಕಲಗೆ ಚಿನ್ನದ ಪದಕದ ಗೌರವ

ಮಂಗಳೂರು : ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಳ ಸ್ನಾತಕೋತ್ತರ ಕೇಂದ್ರದ (S.D.P.T) ವಿದ್ಯಾರ್ಥಿನಿ ಶ್ರಾವ್ಯ ತಳಕಲ ಅವರು ಸಂಸ್ಕೃತ ಎಂ.ಎ. ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ  44ನೇ ಘಟಿಕೋತ್ಸವದ ಸಂದರ್ಭದಲ್ಲಿ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರಿಂದ ಪದಕವನ್ನು ಸ್ವೀಕರಿಸಿದರು. ಈ ಸಂದರ್ಭ ವಿವಿಯ ಕುಲಪತಿ ಡಾ.ಪಿ.ಎಲ್.ಧರ್ಮ, ಸಂಸದ ಬ್ರಿಜೇಶ್ ಚೌಟ ಸೇರಿಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

​ಸಮರ್ಥ ಮುಮ್ಮೇಳ ಕಲಾವಿದೆ:
ಕೇವಲ ಶಿಕ್ಷಣದಲ್ಲಿ ಮಾತ್ರವಲ್ಲದೆ, ಕಲಾಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಶ್ರಾವ್ಯ ಅವರು ಯಕ್ಷಗಾನದ ಸಮರ್ಥ ಮುಮ್ಮೇಳ ಕಲಾವಿದೆಯಾಗಿದ್ದಾರೆ. ಯಕ್ಷಗಾನದ ಹಿರಿಯ ವ್ಯವಸ್ಥಾಪಕರು ಹಾಗೂ ಕಲಾವಿದರಾಗಿದ್ದ ದಿವಂಗತ ತಿಮ್ಮಪ್ಪ ಗುಜರನ್ ತಳಕಲ ಅವರ ಮೊಮ್ಮಗಳಾದ ಇವರು, ತಳಕಲ ಮೇಳದ ವ್ಯವಸ್ಥಾಪಕಿ ಹಾಗೂ ಹಿಮ್ಮೇಳ-ಮುಮ್ಮೇಳ ಕಲಾವಿದೆ ಶ್ರೀಮತಿ ಯೋಗಾಕ್ಷಿ ಗಣೇಶ್ ಅವರ ಪುತ್ರಿ.

Post a Comment

Previous Post Next Post