ತೆಳ್ಳಾರಿನಲ್ಲಿ ಜೈ ತುಲುನಾಡ್ ಕಾರ್ಲ ಘಟಕದ ವಾರ್ಷಿಕ ಮಹಾಸಭೆ;ಘಟಕದ ನೂತನ ಅಧ್ಯಕ್ಷರಾಗಿ ಮಹೇಶ್ ಕುಲಾಲ್ ಬೇಲಾಡಿ ಆಯ್ಕೆ

ಕಾರ್ಕಳ: ತುಳು ಭಾಷೆ, ಲಿಪಿ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಶ್ರಮಿಸುತ್ತಿರುವ ಜೈ ತುಲುನಾಡ್ (ರಿ.) ಸಂಘಟನೆಯ ಕಾರ್ಲ ಘಟಕದ ವಾರ್ಷಿಕ ಮಹಾಸಭೆ ಇತ್ತೀಚೆಗೆ ತೆಳ್ಳಾರು ಶ್ರೀ ಗುರು ರಾಘವೇಂದ್ರ ಮಠದಲ್ಲಿ ಜರುಗಿತು. 

ಸಭೆಯಲ್ಲಿ ಮುಂದಿನ ಅವಧಿಗೆ ಯುವ ಸಂಘಟಕ ಮಹೇಶ್ ಕುಲಾಲ್ ಬೇಲಾಡಿ ಅವರನ್ನು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹಾಲಿ ಅಧ್ಯಕ್ಷ ರವಿಚಂದ್ರ ಕಾರ್ಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ವರ್ಷದ ಚಟುವಟಿಕೆಗಳ ಸಮೀಕ್ಷೆ ನಡೆಸಿ, ಕೇಂದ್ರ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ನೂತನ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ನಿತಿನ್ ನಲ್ಲೂರು, ಮುಖ್ಯ ಕಾರ್ಯದರ್ಶಿಯಾಗಿ ಅಕ್ಷತಾ ಸಾಲ್ಯನ್, ಉಪ ಕಾರ್ಯದರ್ಶಿಯಾಗಿ ಶಶಿಕಲಾ, ಕೋಶಧಿಕಾರಿಯಾಗಿ ಮಹೇಶ್ ಮೊಯ್ಲಿ, ಉಪ ಕೋಶಾಧಿಕಾರಿಯಾಗಿ ಗೌತಮಿ ಶೆಟ್ಟಿಗಾರ್, ಸಂಘಟನಾ ಕಾರ್ಯದರ್ಶಿಯಾಗಿ ಅಶ್ವಿತ್ ಸಮಾನಿ ಬೇಲಾಡಿ, ಉಪ ಸಂಘಟನಾ ಕಾರ್ಯದರ್ಶಿಯಾಗಿ ದೀಪಕ್ ಶೆಟ್ಟಿ ಬೇಲಾಡಿ ಆಯ್ಕೆಯಾಗಿದ್ದಾರೆ. 

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಂತೋಷ್ ಕೆದಿಂಜೆ, ಪ್ರವೀಣ್ ಮುಂಡ್ಲಿ ಹಾಗೂ ರಶ್ಮಿತಾ ಶೆಟ್ಟಿ ಸ್ಥಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಮಹೇಶ್ ಕುಲಾಲ್ ಬೇಲಾಡಿ, “ಕಾರ್ಲ ಘಟಕದ ಮೂಲಕ ತುಳು ಭಾಷೆಯ ಉಳಿವಿಗೆ ಹಾಗೂ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಬದ್ಧರಾಗಿದ್ದೇನೆ” ಎಂದು ಭರವಸೆ ನೀಡಿದರು.

ಸಭೆಯಲ್ಲಿ ಜೈ ತುಲುನಾಡ್ (ರಿ.) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಕೇಶ್ ಕೆಮ್ಮಾಯಿ, ಜೊತೆ ಕಾರ್ಯದರ್ಶಿ ಚಿತ್ರಾಕ್ಷಿ ಮೊಗೆರ ತೆಗ್ಗು, ಕೋಶಾಧಿಕಾರಿ ನಿಶಿಲ್ ಶೆಟ್ಟಿ ಬೇಲಾಡಿ, ಮಾಜಿ ಅಧ್ಯಕ್ಷ ಉದಯ್ ಪೂಂಜ ಸೇರಿದಂತೆ ಹಲವು ಪದಾಧಿಕಾರಿಗಳು, ಹಿರಿಯ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Previous Post Next Post