Top News

ಕಬಡ್ಡಿ ಪಟು ಧನಲಕ್ಷ್ಮಿ ಪೂಜಾರಿಗೆ ಶ್ರೀ ಮಂಗಳಾದೇವಿ ಕರಸೇವಕರು ಬೋಳಾರ ಟ್ರಸ್ಟ್ ನಿಂದ 5 ಲಕ್ಷ ನಗದು ಪುರಸ್ಕಾರ

ಮಂಗಳೂರು: ಶ್ರೀ ಮಂಗಳಾದೇವಿ ಕರ ಸೇವಕರು ಬೋಳಾರ ಟ್ರಸ್ಟ್ ಮತ್ತು ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದಲ್ಲಿ  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ನಲಿಕೆದ ಭಜನೆ ಕುಣಿತ ಭಜನಾ ಸ್ಪರ್ಧೆಯು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನೆರವೇರಿತು.

ಈ ಸಂದರ್ಭ ಭಾರತೀಯ ರಾಷ್ಟ್ರೀಯ ಮಹಿಳಾ ಕಬಡ್ಡಿ ತಂಡದ ಭರವಸೆಯ ಆಟಗಾರ್ತಿ  ಢಾಕಾದಲ್ಲಿ ನಡೆದ ಮಹಿಳಾ ವಿಶ್ವಕಪ್ ಕಬಡ್ಡಿ ಪಂದ್ಯಾವಳಿಯಲ್ಲಿ  ಭಾರತ ತಂಡವನ್ನು ಪ್ರತಿನಿಧಿಸಿದ್ದ ಜಿಲ್ಲೆಯ ಹೆಮ್ಮೆಯ ಕ್ರೀಡಾಪಟು ಧನಲಕ್ಷ್ಮಿ ಪೂಜಾರಿ ಅವರಿಗೆ ಶ್ರೀ ಮಂಗಳಾದೇವಿ  ಕರ ಸೇವಕರು ಬೋಳಾರ ಟ್ರಸ್ಟ್ ನ ಗೌರವಾಧ್ಯಕ್ಷರಾದ ಜೆಪ್ಪು ಚಿದಾನಂದ ನಾಯ್ಕ್  ದೋಹಾ ಕತಾರ್ ಮತ್ತು ಕತಾರ್ ತುಳು ಒಕ್ಕೂಟದ ಸಹಯೋಗದಲ್ಲಿ ನೀಡಲಾದ ಐದು ಲಕ್ಷ ರೂಪಾಯಿ ನಗದು, ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. 

ಸಮಾರಂಭದಲ್ಲಿ ಟ್ರಸ್ಟ್ ವತಿಯಿಂದ ಸಮಾಜದ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಯಕ್ಷ ಧ್ರುವ ಪಟ್ಲ ಮಂಗಳೂರು ಘಟಕದ ಅಧ್ಯಕ್ಷ  ತಾರಾನಾಥ ಶೆಟ್ಟಿ ಬೋಳಾರ, 
ಚಲನಚಿತ್ರ ನಿರ್ಮಾಪಕ  ರವಿ ರೈ ಕಳಸ, ಚಿತ್ರ ನಟ ಶನೀಲ್ ಗೌತಮ್, ಶ್ರೀ ಮಂಗಳಾದೇವಿ ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ  ಜಿ. ರಘುರಾಮ ಉಪಾಧ್ಯಾಯ, ಎಸ್‌. ಹರೀಶ್ ಐತಾಳ್,  ಎಂ. ಅರುಣ್ ಐತಾಳ್, ಬೋಳಾರ ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ  ಅಶೋಕ್ ಕುಮಾರ್. ಬಿ, ಮಾಜಿ ಸದಸ್ಯ  ವೇಣುಗೋಪಾಲ ಪುತ್ರನ್, ಮ. ನ. ಪಾ ಮಾಜಿ ಮೇಯರ್  ಪ್ರೇಮಾನಂದ ಶೆಟ್ಟಿ, ಮಂಗಳಾದೇವಿ  ಕರ ಸೇವಕರು ಬೋಳಾರ ಟ್ರಸ್ಟ್ ನ ಅಧ್ಯಕ್ಷ  ದಯಾನಂದ ಬೋಳಾರ್ , ಗೌರವಾಧ್ಯಕ್ಷ  ಸೀತಾರಾಮ. ಎ , ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ ಬೋಳಾರ, ಸದಸ್ಯರಾದ ಲೋಹಿತ್ ಶೆಟ್ಟಿ, ರಿತೇಶ್ ಯೆಯ್ಯಾಡಿ , ವಿಜೇಶ್ ಬೋಳಾರ , ಚಂದ್ರಶೇಖರ ಉಡುಪಿ ಉಪಸ್ಥಿತರಿದ್ದರು.

Post a Comment

Previous Post Next Post