ಮಂಗಳೂರು: ನಗರದ ಕುಂಜತ್‌ಬೈಲ್‌ನ ‘ರಂಗ ಸ್ವರೂಪ (ರಿ.)’ ಸಂಸ್ಥೆಯ ವತಿಯಿಂದ ಏಪ್ರಿಲ್ 15ರಿಂದ 18ರವರೆಗೆ ನಾಲ್ಕು ದಿನಗಳ ಕಾಲ ‘ರಂಗೋತ್ಸವ - 2026’ ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.
ಮರಕಡದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಶಿಬಿರವು ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಕ್ಕಳಿಗೆ ವಿವಿಧ ಕಲೆಗಳ ತರಬೇತಿ ನೀಡಲಾಗುವುದು.
ಭವಾನಿಯವರಿಗೆ ‘ರಂಗಸ್ವರೂಪ ಪ್ರಶಸ್ತಿ : ಈ ಸಾಲಿನ ಪ್ರತಿಷ್ಠಿತ ‘ರಂಗಸ್ವರೂಪ ಪ್ರಶಸ್ತಿ - 2026’ ಅನ್ನು ನಿವೃತ್ತ ಹಿರಿಯ ಶಿಕ್ಷಕಿ ಭವಾನಿ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಶಿಬಿರದ ಮುಖ್ಯಾಂಶಗಳು:
ಶಿಬಿರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಈ ಕೆಳಗಿನ ವಿಷಯಗಳಲ್ಲಿ ತರಬೇತಿ ನೀಡಲಾಗುವುದು:
ಕಲೆ ಮತ್ತು ಕರಕುಶಲ: ಗಾಳಿಪಟ ರಚನೆ, ಗೋಡೆ ಪತ್ರಿಕೆ, ಮುಖವಾಡ ತಯಾರಿ, ಗೂಡುದೀಪ ರಚನೆ ಮತ್ತು ಗೊಂಬೆ ತಯಾರಿ.
ಪ್ರದರ್ಶಕ ಕಲೆಗಳು: ನಾಟಕ, ಜನಪದ ನೃತ್ಯ, ಮಿಮಿಕ್ರಿ, ಮೂಕಾಭಿನಯ ಮತ್ತು ಹಾಡುಗಾರಿಕೆ.
ವೈಯಕ್ತಿಕ ವಿಕಸನ: ಯೋಗಾಸನ, ಆರೋಗ್ಯ ಅರಿವು ಮತ್ತು ಸೃಜನಾತ್ಮಕ ಚಿತ್ರಕಲೆ.
ಸಮಾರೋಪ ಸಮಾರಂಭ :
ಏಪ್ರಿಲ್ 18ರಂದು ಸಂಜೆ 5 ಗಂಟೆಗೆ ಶಿಬಿರಾರ್ಥಿಗಳಿಂದ ‘ಪ್ರತಿಭಾ ಪ್ರದರ್ಶನ’ ನಡೆಯಲಿದ್ದು, ಸಂಜೆ 6 ಗಂಟೆಗೆ 'ಸಾಂಸ್ಕೃತಿಕ ಸಂಜೆ’ಯೊಂದಿಗೆ ಸಮಾರೋಪ ಸಮಾರಂಭ ಜರುಗಲಿದೆ.
ಶಿಬಿರದಲ್ಲಿ ಭಾಗವಹಿಸುವ ಪ್ರತಿ ಮಗುವಿಗೂ ಪ್ರಮಾಣಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ರೆಹಮಾನ್ ಖಾನ್ ಕುಂಜತ್ತಬೈಲ್ (9880835659) ಅವರನ್ನು ಸಂಪರ್ಕಿಸಬಹುದಾಗಿದೆ.
Very creative and usefull summer camp for students.
ReplyDeletePost a Comment