Top News

ತಾನು ನಟಿಸಿದ 'ಕಟ್ಟೆಮಾರ್' ಸಿನಿಮಾ ಯಶಸ್ಸಿಗಾಗಿ ಪೋಸ್ಟರ್ ಹಿಡಿದುಕೊಂಡು ಶಬರಿಮಲೆಗೆ ಪಾದಯಾತ್ರೆ ಹೊರಟ ಕಿರಣ್ ಅಡ್ಯಾರ್ ಪದವು

ತುಳು ಚಿತ್ರರಂಗದ ಬಹು ನಿರೀಕ್ಷಿತ ‘ಕಟ್ಟೆಮಾರ್’ ಚಿತ್ರತಂಡದಲ್ಲಿ ನಟಿಸಿರುವ ಕಿರಣ್ ಅಡ್ಯಾರ್ ಪದವು ಅವರು ತಮ್ಮ ಸಿನೆಮಾ ಯಶಸ್ಸಿನ ಆಶಯದೊಂದಿಗೆ ಶಬರಿಮಲೆ ತನಕ ಪಾದಯಾತ್ರೆ ಆರಂಭಿಸಿದ್ದಾರೆ. ಪೋಸ್ಟರ್ ಹಿಡಿದು ದೈವಿಕ ಭಾವದೊಂದಿಗೆ ಹೊರಟಿರುವ ಈ ಪಾದಯಾತ್ರೆ ಜನವರಿ 13ರಂದು ಶಬರಿಮಲೆ ತಲುಪಲಿದೆ.

ವಿಶೇಷವಾಗಿ ದೈವಿಕ ಹಿನ್ನೆಲೆಯನ್ನು ಹೊಂದಿರುವ ‘ಕಟ್ಟೆಮಾರ್’ ಚಿತ್ರವನ್ನು ರಕ್ಷಿತ್ ಗಾಣಿಗ ಮತ್ತು ಸಚಿನ್ ಕಟ್ಲ ಜಂಟಿಯಾಗಿ ನಿರ್ದೇಶಿಸಿದ್ದಾರೆ. ಸಂತೋಷ್ ಗುಂಪಲಾಜೆ ಅವರ ಛಾಯಾಗ್ರಹಣ, ಕಾರ್ತಿಕ್ ಮುಲ್ಕಿ ಅವರ ಸಂಗೀತ ಹಾಗೂ ರಿತೇಶ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ.
ಸುಪ್ರಸಿದ್ಧ ‘ಸು ಫ್ರಂ ಸೊ’ ಖ್ಯಾತಿಯ ಜೆಪಿ ತುಮಿನಾಡ್ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಾಂತಾರ’ ಖ್ಯಾತಿಯ ಸ್ವರಾಜ್ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದು, ಮೈಮ್ ರಾಮ್ ದಾಸ್ ಹಾಗೂ ‘ಭಾವಬಂದರು’ ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್ ಕೂಡ ಚಿತ್ರತಂಡದಲ್ಲಿದ್ದಾರೆ.
ಕಥೆಗೆ ಹೆಚ್ಚಿನ ಒತ್ತು ನೀಡಿ ವಿಭಿನ್ನ ಶೈಲಿಯ ಸ್ಕ್ರೀನ್ ಪ್ಲೇ ರೂಪಿಸಲಾಗಿದೆ ಎನ್ನುವ ಮಾತುಗಳು ತುಳು ಚಿತ್ರರಂಗದಲ್ಲಿ ಈಗಾಗಲೇ ಕೇಳಿಬರುತ್ತಿದ್ದು, ‘ಕಟ್ಟೆಮಾರ್’ ಸಿನೆಮಾ ಮೇಲೆ ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿದೆ.

Post a Comment

Previous Post Next Post