ಮಂಗಳೂರು: ರಂಗಚಾವಡಿ ಮಂಗಳೂರು ವತಿಯಿಂದ ಪ್ರದಾನಿಸಲಾಗುವ 2025ನೇ ಸಾಲಿನ 'ರಂಗಚಾವಡಿ' ಪ್ರಶಸ್ತಿಗೆ ತುಳು ರಂಗಭೂಮಿ ಹಾಗೂ ಸಿನಿ ರಂಗದ ಖ್ಯಾತ ನಟ ಕುಸಲ್ದರಸೆ ಖ್ಯಾತಿಯ ನವೀನ್ ಡಿ.ಪಡೀಲ್ ಭಾಜನರಾಗಿದ್ದಾರೆ.
ರಂಗಚಾವಡಿ ಮಂಗಳೂರು ಹಾಗೂ ಸುಭಾಷಿತನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್ ಸುರತ್ಕಲ್ ಸಹಯೋಗದಲ್ಲಿ ನ.9ರಂದು ಸಂಜೆ 4.30ಕ್ಕೆ ಸುರತ್ಕಲ್ ಭಂಟರ ಭವನದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ರಂಗಭೂಮಿ, ಸಿನಿಮಾ ಮತ್ತು ಕಲಾ ಕ್ಷೇತ್ರದಲ್ಲಿ ನೀಡಿರುವ ಅನನ್ಯ ಕೊಡುಗೆ ಹಾಗೂ ಸಾಧನೆಯ ಹಿನ್ನೆಲೆಯಲ್ಲಿ ಕುಸೇಲ್ದರಸೆ ನವೀನ್ ಡಿ. ಪಡೀಲ್ ಅವರಿಗೆ ಪ್ರಶಸ್ತಿ ಲಭಿಸಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ‘ಕಲಿ ವಲಿ ಕಾಮಿಡಿ’ ಎಂಬ ಭರ್ಜರಿ ಹಾಸ್ಯ ನಾಟಕ ಹಾಗೂ ‘ರಾಗ್ ರಂಗ್ ಸಂಗೀತ ರಸಮಂಜರಿ’ ಸಂಗೀತ ಕಾರ್ಯಕ್ರಮ ನಡೆಯಲಿದೆ. “ಬಾವ ಬಂದರೋ” ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್ ಸೇರಿದಂತೆ ಹಲವಾರು ಖ್ಯಾತ ಹಾಸ್ಯ ಕಲಾವಿದರು ಮತ್ತು ಸಂಗೀತ ವಿದ್ವಾಂಸರು ಭಾಗವಹಿಸಿ ಪ್ರೇಕ್ಷಕರಿಗೆ ನಗೆ ಮತ್ತು ರಾಗದ ಸವಿಯನ್ನು ನೀಡಲಿದ್ದಾರೆ.
ಗೀತಗಾಯನ, ಹಾಸ್ಯ ರಸಾಯಣ, ನಾನ್‌ಸ್ಟಾಪ್ ಕಾಮಿಡಿ—ಎಲ್ಲದರ ಸಂಯೋಜನೆಯಿಂದ ಕಾರ್ಯಕ್ರಮವು ನಗುವಿನ ಹಬ್ಬವಾಗಲಿದ್ದು, ಎಲ್ಲರಿಗೂ ಪ್ರವೇಶ ಉಚಿತ — ನಗು ಖಚಿತ! ಎಂದು ರಂಗಚಾವಡಿ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment