ನಮ್ಮ ವಾಟ್ಸಾಪ್ ಗುಂಪು ಸೇರಲು ಕ್ಲಿಕ್ ಮಾಡಿ

Dharmasthala Case | ಬಂಗ್ಲಗುಡ್ಡೆಯಲ್ಲಿ ಸಿಕ್ಕಿತೆ ಅಸ್ತಿಪಂಜರ ಅವಶೇಷಗಳು ? ; ತೀವ್ರ ಶೋಧ ನಡೆಸುತ್ತಿರುವ ಎಸ್‌ಐಟಿ



ಬಂಗ್ಲೆಗುಡ್ಡ ಕಾಡಿನಲ್ಲಿ ಶಂಕಾಸ್ಪದ ಅಸ್ತಿಪಂಜರ ಪತ್ತೆಯಾದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (SIT) ತೀವ್ರ ಶೋಧ ನಡೆಸುತ್ತಿದೆ ಎನ್ನಲಾಗುತ್ತಿದೆ.

ಪತ್ತೆಯಾದ ಮೂಳೆಗಳ ಜೊತೆಗೆ ಬಟ್ಟೆಯ ತುಂಡುಗಳು ಸಹ ಸಿಕ್ಕಿದ್ದು, ಸ್ಥಳದಲ್ಲಿ ಶೋಧ ಮುಂದುವರೆದಿದೆ. ಮೂಳೆಗಳು ಪತ್ತೆಯಾದ ಪ್ರದೇಶದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿರುವ ಸೋಕೋ (Scene of Crime Officers), ಆ ಭಾಗದಲ್ಲಿ ಸೂಕ್ಷ್ಮ ತನಿಖೆ ಕೈಗೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಎಸ್‌ಐಟಿ ಅಧಿಕಾರಿಗಳು ಪತ್ತೆಯಾದ ಭಾಗವನ್ನು ಮಹಜರು ಮಾಡುತ್ತಿದ್ದು, ಇದು ಹಿಂದಿನ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಿದೆಯೇ ಎಂಬ ಕುರಿತು ಪರಿಶೀಲನೆ ಆರಂಭಿಸಿದ್ದಾರೆ.

ಈ ಬೆಳವಣಿಗೆ ಮಂಗಳೂರಿನಲ್ಲಿ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ.
Previous Post Next Post