ಬುರೈದ ರೆಸಾರ್ಟ್‌ನಲ್ಲಿ ವಿಜೃಂಭಣೆಯಿಂದ ಜರುಗಿದ ‘ಲೆಗೆಸಿ ನೈಟ್–2026’ ಮೂಲಕ KCF ಅಲ್ ಕಸೀಮ್ ಝೋನ್‌ನ ಕುಟುಂಬ ಮಿಲನ

ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಅಲ್ ಕಸೀಮ್ ಝೋನ್ ವತಿಯಿಂದ ಆಯೋಜಿಸಿದ್ದ ‘ಲೆಗೆಸಿ ನೈಟ್–2026’ ಫ್ಯಾಮಿಲಿ ಮೀಟ್ ಕಾರ್ಯಕ್ರಮವು ಬುರೈದ ರೆಸಾರ್ಟ್‌ನಲ್ಲಿ ವಿಜೃಂಭಣೆಯಿಂದ ಜರುಗಿತು.

ಕುಟುಂಬ ಮಿಲನದ ಅಂಗವಾಗಿ ಮಕ್ಕಳ ಕಲಾ ಪ್ರತಿಭೆಗಳ ಅನಾವರಣ, ದಫ್ಫ್, ಕವಾಲಿ, ಸೌಹಾರ್ದ ಸಂಗಮ, ಇಸ್ಲಾಮಿಕ್ ಪ್ರಭಾಷಣ, ಅನ್ನದಾನ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

ಕಾರ್ಯಕ್ರಮದ ಭಾಗವಾಗಿ ಬುರೈದ ಭಾಗದ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಾಮಾಜಿಕ, ಸಾಮುದಾಯಿಕ ಹಾಗೂ ಶೈಕ್ಷಣಿಕ ನಾಯಕರು ಪಾಲ್ಗೊಂಡ ‘ಸೌಹಾರ್ದ ಸಂಗಮ’ ಗಮನ ಸೆಳೆಯಿತು.

ಅಬ್ದುಲ್ ಖಾದರ್ ಕಣ್ಣಂಗಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸ್ವಾಗತ ಸಮಿತಿ ಕನ್ವಿನರ್ ಸಾಲಿಹ್ ಬೆಳ್ಳಾರೆ ಸ್ವಾಗತಿಸಿದರು. KCF ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ KCF ರಿಯಾದ್ ಝೋನ್ ಕೋಶಾಧಿಕಾರಿ ಹಬೀಬುಲ್ಲಾ ತೆಕ್ಕಾರ್, ಸಂಘಟನೆಯ ಕಾರ್ಯಾಚರಣೆಗಳು ಹಾಗೂ ಚಟುವಟಿಕೆಗಳ ಕುರಿತು ವಿವರಿಸಿದರು.

ಮುಹಮ್ಮದ್ ಹಾಜಿ ಕುಕ್ಕುವಳ್ಳಿಗೆ ‘ಇನ್‌ಸ್ಪೈರ್ ಅವಾರ್ಡ್’ :
ಸಮಾಜ ಸೇವೆ ಹಾಗೂ ಸಾಮುದಾಯಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಖ್ಯಾತ ಸಮಾಜ ಸೇವಕ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಅವರಿಗೆ ‘KCF AL QASSIM ZONE INSPIRE AWARD–2026’ ನೀಡಿ ಗೌರವಿಸಲಾಯಿತು.
ಝೋನ್ ಕಾರ್ಯದರ್ಶಿ ಶಾಹುಲ್ ಹಮೀದ್ ಮಣ್ಣಾಪು ವಂದಿಸಿದರು.

ದಫ್ಫ್–ಕವಾಲಿಗೆ ಸಭಿಕರ ಮೆಚ್ಚುಗೆ : ರಿಯಾದ್ KCF ತಂಡದಿಂದ ನಡೆದ ದಫ್ಫ್ ಹಾಗೂ ಕವಾಲಿ ಪ್ರದರ್ಶನವು ಸಭಿಕರ ಗಮನ ಸೆಳೆಯಿತು. ವೇದಿಕೆಯಲ್ಲಿ ಡಾ. ಫಾರೂಕ್ ನಈಮಿ ಉಸ್ತಾದ್ ರಚಿಸಿದ ‘ಹಿಜ್ರಾ ಹೆಜ್ಜೆ ಗುರುತುಗಳು’ ಪುಸ್ತಕದ ಕನ್ನಡ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.
ಇದೇ ವೇಳೆ ಅಗಲಿದ KCF ಕಾರ್ಯಕರ್ತರ ಅನುಸ್ಮರಣೆಯೂ ನಡೆಯಿತು.

ಹಲವು ಗಣ್ಯರ ಉಪಸ್ಥಿತಿ  :
ಕಾರ್ಯಕ್ರಮದಲ್ಲಿ ಕೇರಳದ ಮಲಪ್ಪುರಂ ನಿಲಂಬೂರು ‘ಮಜಮಹ್ ಸಖಾಫತಿ’ ಸಂಸ್ಥೆಯ ಸಾರಥಿ ಶೈಖುನಾ ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ, KCF ಅಲ್ ಕಸೀಮ್ ಝೋನ್ ಅಧ್ಯಕ್ಷ ಅಬ್ದುಲ್ ಕರೀಮ್ ಇಮ್ದಾದಿ, ಬುರೈದ ICF ಹಿರಿಯ ನಾಯಕ ಅಬ್ದುಲ್ ಖಾದರ್ ದಾರಿಮಿ, ಝೋನ್ ಸಂಘಟನಾ ಇಲಾಖೆ ಅಧ್ಯಕ್ಷ ಮುಸ್ತಾಫಾ ಲತೀಫಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Post a Comment

Previous Post Next Post