ಕರಂಬಾರು : ಕುಸಿದ ಸೇತುವೆ ಬಳಿ ವಾಹನ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ; ಹಲವು ದಿನಗಳ ಬಳಿಕ ವಾಹನಗಳ ಓಡಾಟ ಆರಂಭ !

ಮಂಗಳೂರು ಹಾಗೂ ಬಜಪೆಯನ್ನು ಸಂಪರ್ಕಿಸುವ ರಸ್ತೆಯ ಕರಂಬಾರು ಸಮೀಪದ ಸೇತುವೆಯೊಂದು ಕುಸಿದು ಕಳೆದ ಐದಾರು ದಿನಗಳಿಂದ ಈ ರಸ್ತೆಯಲ್ಲಿ ವಾಹನ ಓಡಾಟವೇ ಸ್ಥಗಿತಗೊಂಡಿತ್ತು.

ಮಂಗಳೂರಿನಿಂದ ಬಜಪೆ ಕಡೆಗೆ ತೆರಳುವವರು ಪೊರ್ಕೋಡಿ, ಅದ್ಯಪಾಡಿ ಸೇರಿದಂತೆ ನಾನಾ ಕಡೆಗಳ ಮೂಲಕ ಸುತ್ತು ಬಳಸಿ ತೆರಳಬೇಕಾದಂತ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ದ್ವಿಚಕ್ರ ವಾಹನ ಸಂಚಾರವೂ ಸಾಧ್ಯವಾಗದೇ ಇದ್ದುದರಿಂದ ಅಪಾರ ಸಂಖ್ಯೆಯಲ್ಲಿ ಜನ ಸಮಸ್ಯೆಗೆ ಈಡಾಗಿದ್ದರು.

ಇದೀಗ ಜನರ ಓಡಾಟಕ್ಕೆ ಸೇತುವೆಯ ಪಕ್ಕದಲ್ಲಿ ರಸ್ತೆಯ ವ್ತವಸ್ಥೆಯನ್ನು ಮಾಡಲಾಗಿದ್ದು, ಸೋಮವಾರ ಸಂಜೆ ವಾಹನಗಳ ಓಡಾಟ ನಡೆದಿದೆ. ಇನ್ನೂ ಸೇತುವೆ ಕಾಮಗಾರಿ ಮುಂದುವರಿದಿದ್ದು, ಶೀಘ್ರದಲ್ಲಿ ಸೇತುವೆ ನಿರ್ಮಾಣಗೊಂಡು ಮುಖ್ಯ ರಸ್ತೆಯಲ್ಲಿಯೇ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ.

Post a Comment

Previous Post Next Post