ಬಜ್ಪೆ ಪಟ್ಟಣ ಪಂಚಾಯಿತಿ ಕೌನ್ಸಿಲರ್ ಚನ್ನಪ್ಪ ಸಾಲ್ಯಾನ್ ನಿಧನ

ಬಜ್ಪೆ: ಬಜ್ಪೆ ಪಟ್ಟಣ ಪಂಚಾಯಿತಿಯ ಕೌನ್ಸಿಲರ್ ಆಗಿ ಜನಸೇವೆ ಸಲ್ಲಿಸುತ್ತಿದ್ದ ಶ್ರೀ ಚನ್ನಪ್ಪ ಸಾಲ್ಯಾನ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು.

ಅವರ ನಿಧನಕ್ಕೆ ಬಜ್ಪೆ ಪಟ್ಟಣ ಪಂಚಾಯಿತಿ ಕೌನ್ಸಿಲರ್ ಸಿರಾಜ್ ಬಜ್ಪೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಯಾಗಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಚನ್ನಪ್ಪ ಸಾಲ್ಯಾನ್ ಅವರ ಅಗಲಿಕೆ ದುಃಖ ತಂದಿದೆ ಎಂದು ಅವರು ತಿಳಿಸಿದ್ದಾರೆ.

“ಚನ್ನಪ್ಪ ಸಾಲ್ಯಾನ್ ಅವರ ನಿಧನದ ಸುದ್ದಿ ಅತ್ಯಂತ ದುಃಖವನ್ನುಂಟುಮಾಡಿದೆ. ಅವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನು ಕರುಣಿಸಲಿ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬ ವರ್ಗದವರು, ಬಂಧು-ಬಳಗದವರು ಹಾಗೂ ಹಿತೈಷಿಗಳಿಗೆ ಸೃಷ್ಟಿಕರ್ತನು ನೀಡಲಿ” ಎಂದು ಸಿರಾಜ್ ಬಜ್ಪೆ ಸಂತಾಪ ಸೂಚಿಸಿದ್ದಾರೆ.

Post a Comment

Previous Post Next Post