ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯ ಬೀಗ ಮುರಿದು ಹಣ ಕಳವು ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿ, ಕಳುವಾದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಆಗಸ್ಟ್ 18ರಂದು ಮಧ್ಯರಾತ್ರಿ ದೇವಸ್ಥಾನದ ಮಾಡಿನ ಮೇಲೆ ಅಳವಡಿಸಿದ್ದ ಜಾಲರಿ ಮೂಲಕ ಒಳಪ್ರವೇಶಿಸಿದ ಆರೋಪಿ, ದೇವಸ್ಥಾನದ ಸಿಸಿಟಿವಿ ಕ್ಯಾಮರಾವನ್ನು ತಿರುಗಿಸಿ ಬಳಿಕ ಕಾಣಿಕೆ ಹುಂಡಿಯ ಬೀಗ ಮುರಿದು ಹಣ ಕಳವು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಮುಲ್ಕಿ ಠಾಣೆಯ ಪೊಲೀಸರು ರವಿಕುಮಾರ @ ರವಿ ಹೆಚ್.ಜಿ. (20) ಎಂಬಾತನನ್ನು ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಪೋಸ್ಟ್ ವ್ಯಾಪ್ತಿಯ ಅಜ್ಜಿಮಡ, ಕುಬೇರಂಗಡಿ ನಿವಾಸಿಯಾಗಿರುವ ಆರೋಪಿಯಿಂದ ಕಳವು ಮಾಡಲಾಗಿದ್ದ ₹2,195 ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮುಲ್ಕಿ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿಯ ವಿರುದ್ಧ ದಾಖಲಾಗಿರುವ ಪ್ರಕರಣಗಳು
1. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಅ.ಕ್ರ. 44/2024 – ಕಲಂ 457, 380 ಐಪಿಸಿ.
2. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಅ.ಕ್ರ. 148/2024 – ಕಲಂ 457, 380 ಐಪಿಸಿ.
3. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಅ.ಕ್ರ. 365/2024 – ಕಲಂ 303(2) ಬಿಎನ್‌ಎಸ್ ಜೊತೆಗೆ 86 ಕೆಎಫ್ ಆಕ್ಟ್.
4. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಅ.ಕ್ರ. 386/2024 – ಕಲಂ 303(2) ಬಿಎನ್‌ಎಸ್ ಜೊತೆಗೆ 86 ಕೆಎಫ್ ಆಕ್ಟ್.
5. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಅ.ಕ್ರ. 354/2024 – ಕಲಂ 331(3), 305 ಬಿಎನ್‌ಎಸ್.
Post a Comment