ಮಂಗಳೂರು, ಜು.22: ಮಂಗಳೂರಿನ ಪಚ್ಚನಾಡಿ ಬಂದಲೆ ಮೂಡುಮನೆ ಶ್ರೀಮಂತ ರಾಜಗುಳಿಗ ಕ್ಷೇತ್ರದಲ್ಲಿ ದಶಮ ಸಂಭ್ರಮದ ಆಟಿಡೊಂಜಿ ದಿನ ಕಾರ್ಯಕ್ರಮವು ಜುಲೈ 26ರಂದು (ಭಾನುವಾರ) ಬೆಳಗ್ಗೆ 8.30ರಿಂದ ಸಂಜೆ 6ರವರೆಗೆ ಕ್ಷೇತ್ರದ ಪ್ರಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗ್ರಾಮದ ಅಶಕ್ತರಿಗೆ ಸಹಾಯಧನ ವಿತರಣೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಸಮಾಜದ ಗೌರವಾನ್ವಿತ ಸಾಧಕರೊಬ್ಬರನ್ನು ಗುರುತಿಸಿ 'ಬಂದಲೆ ಪ್ರಶಸ್ತಿ' ಪ್ರದಾನ ಮಾಡಿ ಗೌರವಿಸಲಾಗುವುದು.
ಕಾರ್ಯಕ್ರಮಗಳ ವೇಳಾಪಟ್ಟಿ :
★ಬೆಳಿಗ್ಗೆ 8.00 – 9.00: ಭಜನಾ ಕಾರ್ಯಕ್ರಮ
★ಬೆಳಿಗ್ಗೆ 9.30: ಸಭಾ ಕಾರ್ಯಕ್ರಮ
★ಮಧ್ಯಾಹ್ನ 1.00: ಭೋಜನ ಕೂಟ
★ಮಧ್ಯಾಹ್ನ 2.00 – 4.00: ಪ್ರಸನ್ನ ಶೆಟ್ಟಿ ಬೈಲೂರು ಹಾಗೂ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಸಾರಥ್ಯದ ಪ್ರಶಂಸ ಕಾಪು ತಂಡದಿಂದ 'Comedy Shots' ತುಳು ಕಾಮಿಡಿ ಶೋ
★ಸಂಜೆ 4.00 – 5.00: ಮನೋರಂಜನಾ ಕಾರ್ಯಕ್ರಮ
★ಸಂಜೆ 5.00: ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕ್ಷೇತ್ರದ ಧರ್ಮದರ್ಶಿ ಸತೀಶ್ ಪೂಜಾರಿ ಬಂದಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment