ಮೇ.15ರಂದು ನಟ ದರ್ಶನ್ ಅರ್ಜಿ ವಿಚಾರಣೆ ; ಸಿಗಬಹುದಾ 'ದಾಸ'ನಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ?

ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬಳಿಕ ನಟ ದರ್ಶನ್, ರೇಣುಕಾಸ್ವಾಮಿ ಪ್ರಕರಣದಲ್ಲಿ ಎರಡನೇ ಬಾರಿ ಜೈಲು ಸೇರಿ ವರ್ಷವಾಗುತ್ತಿದೆ.  

ಸುಪ್ರೀಂ ಕೋರ್ಟ್ ಜಾಮೀನು ನೀಡಬೇಕೆಂದು ದರ್ಶನ್ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಕೋರ್ಟ್ ಸಾಕ್ಷ್ಯಗಳ ವಿಚಾರಣೆಯನ್ನು ನಡೆಸುತ್ತಿದ್ದು, ವಿಚಾರಣೆ ವಿಳಂಬವಾಗುತ್ತಿದೆ.

ತ್ವರಿತಗತಿಯಲ್ಲಿ ವಿಚಾರಣೆ ನಡೆಸಬೇಕೆಂದು ದರ್ಶನ್ ಆಗ್ರಹಿಸಿದ್ದಾರೆ. ಜಾಮೀನು ಅರ್ಜಿಯ ಜತೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ. 

ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆ ಶುಕ್ರವಾರ (ಮೇ 15) ನಡೆಯಲಿದ್ದು, ಕೋರ್ಟ್ ಯಾವ ಆದೇಶ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

270 ಸಾಕ್ಷ್ಯಗಳ ಪೈಕಿ 10 ಸಾಕ್ಷ್ಯ ವಿಚಾರಣೆಯನ್ನೂ ಮಾಡಿಲ್ಲ. ತ್ವರಿತವಾಗಿ ವಿಚಾರಣೆ ನಡೆಯುತ್ತಿಲ್ಲ. ಸಾಕ್ಷ್ಯಗಳ ವಿಚಾರಣೆ ನಡೆಯುವವರೆಗೆ ತಮಗೆ ಜಾಮೀನು ನೀಡಬೇಕೆಂದು ದರ್ಶನ್ ಮನವಿ ಮಾಡಿದ್ದಾರೆ.

Post a Comment

Previous Post Next Post