Top News

ರೋಟರ‌್ಯಾಕ್ಟ್ ಸಂಸ್ಥೆಯ ಧ್ಯೇಯ, ಉದ್ದೇಶ ಪಾಲಿಸಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿ : ರೋ.ವಿಕ್ರಮ್ ದತ್ತ

ಮಂಗಳೂರು : "ಅಂತರಾಷ್ಟ್ರೀಯ ರೋಟರ‌್ಯಾಕ್ಟ್ ಸಂಸ್ಥೆಯು ಯುವಕರಿಗಾಗಿ ಸ್ಥಾಪಿಸಿದ ಸ್ವಯಂ ಪ್ರೇರಿತ ಸಮಾಜ ಸೇವಾ ಸಂಸ್ಥೆಯಾಗಿದ್ದು ಸದಸ್ಯರ ವ್ಯಕ್ತಿ ವಿಕಸನ, ನಾಯಕತ್ವ ಗುಣ ಮತ್ತು ವೃತ್ತಿ ಮಾರ್ಗದರ್ಶನಕ್ಕೆ ಸೂಕ್ತ ವೇದಿಕೆಯಾಗಿದ್ದು, ಯುವಕರು ಕ್ರೀಯಾಶೀಲರಾಗಿ ಶ್ರಮಿಸಿ ನಿಸ್ವಾರ್ಥ ಸೇವಾ ಮನೋಭಾವದಿಂದ ಯಶಸ್ಸು ಸಾಧಿಸಿ ಸಂಸ್ಥೆಯನ್ನು ಬಲಪಡಿಸಬೇಕು. ಸಮಾಜದ ಸೇವಾಭಿವೃದ್ದಿಗಾಗಿ ಶ್ರಮಿಸಬೇಕು" ಎಂದು ರೋಟರಿ ಜಿಲ್ಲಾ ಮಾಜಿ ಗವರ್ನ‌ರ್ ರೋ.ವಿಕ್ರಮ್ ದತ್ತ ಸಲಹೆ ನೀಡಿದರು. 

ನಗರದ ಸ್ವಸ್ತಿಕಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರಗಿದ ನೂತನ ರೋಟರೆಕ್ಟ್ ಕ್ಲಬ್ ಆಫ್ ಸ್ವಸ್ಥಿಕಾ ನ್ಯಾಷನಲ್ ಬಿಸ್ನೆಸ್ ಸ್ಕೂಲ್ ಹಾಗೂ ರೋಟರೆಕ್ಟ್ ಕ್ಲಬ್ ಆಫ್ ಮಂಗಳೂರು ಸ್ವಸ್ಥಿಕಾ ಸಂಸ್ಥೆಗಳನ್ನು ಉದ್ಘಾಟಿಸಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಸನ್ನದನ್ನು ನೂತನ ಅಧ್ಯಕ್ಷರಾದ ಶೀತಲ್ ಮತ್ತು ಮುಲಿಯಾ ಸಾತ್ವಿಕ್ ಇವರಿಗೆ ಪ್ರದಾನ ಮಾಡಿ ಅಭಿನಂದಿಸಿದರು.

ರೋಟರಿ ಜಿಲ್ಲಾ ಸಹಾಯಕ ಗವರ್ನರ್ ರೋ.ಡಾ.ರವಿಶಂಕರ್ ರಾವ್‌ ಗೌರವ ಅತಿಥಿಯಾಗಿ ಪಾಲ್ಗೊಂಡು, ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿ ಯಶಸ್ಸು ಸಾಧಿಸಬೇಕೆಂದು ಕರೆ ನೀಡಿ ನೂತನ ತಂಡಕ್ಕೆ ಶುಭ ಕೋರಿದರು.

ರೋಟರೆಕ್ಟ್ ಕರಾವಳಿ ವಲಯದ ಪ್ರತಿನಿಧಿ ರೋ.ಚಮನ್ ನೂತನ ನೂತನ ಅಧ್ಯಕ್ಷೆ ಶೀತಲ್ ಮತ್ತು ಮುಲಿಯಾ ಸಾತ್ವಿಕ್ ಮತ್ತು ಕಾರ್ಯದರ್ಶಿಗಳಾದ ಶ್ರೀನಿಧಿ ಹಾಗೂ ಪ್ರಜ್ವಲ್ ಶೇಟ್, ಮತ್ತು ಇತರ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿವಿಧಾನವನ್ನು ಭೋದಿಸಿ ತಂಡಕ್ಕೆ ಯಶಸ್ಸು ಹಾರೈಸಿದರು.

ರೋಟರೆಕ್ಟ್ ಜಿಲ್ಲಾ ನಿರ್ದೇಶಕರಾದ ರೋ.ಡಾ.ರಂಜನ್ ರಾವ್, ಸಂಸ್ಥೆಯ ಪ್ರಾಂಶುಪಾಲರಾದ ಡಾ.ಮಾಲಿನಿ ಹೆಬ್ಬಾರ್, ಸಂಸ್ಥೆಯ ನಿರ್ದೇಶಕರಾದ ಸುಮನ್ ಪೊಳಲಿ ಉಪಸ್ಥಿತರಿದ್ದರು.

ರೋಟರಿ ಮಂಗಳೂರು ಡೌನ್ ಟೌನ್ ಸಂಸ್ಥೆಯ ಅದ್ಯಕ್ಷರಾದ ರೋ.ಸತ್ಯಜೀತ್ ರಾವ್ ಸ್ವಾಗತಿಸಿದರು. ಡಾ. ಉಷಾರಾಣಿ ಮತ್ತು ಶ್ರೀಮತಿ ಭಾಗ್ಯಶ್ರೀ ನಿರೂಪಿಸಿದ ಕಾರ್ಯಕ್ರಮದಲ್ಲಿ ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಅದ್ಯಕ್ಷೆಯಾದ ರೋ. ಸಜ್ಞಾ ಭಾಸ್ಕ‌ರ್ ವಂದಿಸಿದರು.

Post a Comment

Previous Post Next Post