ಬಾಂಗ್ಲಾದೇಶದಲ್ಲಿ ನವೆಂಬರ್ 13ರಂದು ನಡೆಯಲಿರುವ 12 ರಾಷ್ಟ್ರಗಳ ಮಹಿಳಾ ವಿಶ್ವಕಪ್ ಕಬಡ್ಡಿ ಟೂರ್ನಮೆಂಟ್‌ಗೆ ಭಾರತದ ಪರವಾಗಿ ಸುರತ್ಕಲ್ ಇಡ್ಯಾ ನಿವಾಸಿ ನಾರಾಯಣ ಪೂಜಾರಿ–ಶಶಿಕಲಾ ದಂಪತಿಯ ಪುತ್ರಿ ಧನಲಕ್ಷ್ಮೀ ಪೂಜಾರಿ ಆಯ್ಕೆಯಾಗಿದ್ದಾರೆ.
ಕಬಡ್ಡಿಯಲ್ಲಿ ಧನಲಕ್ಷ್ಮೀ ತೋರಿದ ಸಾಮರ್ಥ್ಯವನ್ನು ಗುರುತಿಸಿದ ಡಾ. ಎಂ. ಮೋಹನ್ ಆಳ್ವ ಅವರು ತಮ್ಮ ಸಂಸ್ಥೆಯಲ್ಲಿ ಉಚಿತ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟು ನಿರಂತರ ಪ್ರೋತ್ಸಾಹ ನೀಡಿದ್ದಾರೆ. ಈ ಬೆಂಬಲದೊಂದಿಗೆ ಧನಲಕ್ಷ್ಮೀ 2025ರ ಸೀನಿಯರ್ ಲೆವೆಲ್ ಫೆಡರೇಶನ್ ಕಬಡ್ಡಿ ಸ್ಪರ್ಧೆಯಲ್ಲಿ ರಾಜ್ಯ ತಂಡವನ್ನು ನಾಯಕಿಯಾಗಿ ಮುನ್ನಡೆಸಿದ್ದರು.
ಇದುವರೆಗೆ ಅವರು 12 ಬಾರಿ ರಾಜ್ಯವನ್ನು ಪ್ರತಿನಿಧಿಸಿದ್ದು, ಜೂನಿಯರ್, ಸೀನಿಯರ್ ಹಾಗೂ ಖೇಲೋ ಇಂಡಿಯಾ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಮಿಂಚಿಸಿದ್ದಾರೆ. ಈ ಬಾರಿ ವಿಶ್ವಕಪ್‌ಗೆ ಕರ್ನಾಟಕದಿಂದ ಮಾತ್ರ ಧನಲಕ್ಷ್ಮೀ ಒಬ್ಬರೇ ಆಯ್ಕೆಯಾಗಿರುವುದು ವಿಶೇಷ.
Post a Comment