ಮಂಗಳೂರು: ಆದಿ ಕ್ಷೇತ್ರ ಜಾರ ಶ್ರೀ ಜಾರಂದಾಯ ದೈವಸ್ಥಾನ, ಜಾರ ಮೂಡುಶೆಡ್ಡೆಯಲ್ಲಿ ನೂತನ ಕೊಡಿ ಮರದ ಭವ್ಯ ಮೆರವಣಿಗೆ ಶನಿವಾರ ನಡೆಯಿತು.
ಶ್ರೀ ರಾಮ ಭಜನಾ ಮಂದಿರ, ನಿಸರ್ಗ ಧಾಮದಿಂದ ಜಾರ ದೈವಸ್ಥಾನದವರೆಗೆ ವಿಜೃಂಭಣೆಯಿಂದ ಮೆರವಣಿಗೆ ಸಾಗಿತು. ಸತ್ಯನಾಥ ಸೇವಾ ಬಳಗ ಜಾರ ಅವರ ಸಹಕಾರದಲ್ಲಿ ನಡೆದ ಈ ಮೆರವಣಿಗೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಕ್ಷೇತ್ರದ ಗಡಿ ಪ್ರಧಾನರಾದ ಜತ್ತಿ ಪೂಜಾರಿ, ಮಾಜಿ ಸಚಿವ ರಮಾನಾಥ ರೈ, ಮುಖಂಡರಾದ ಸುದರ್ಶನ್ ಮೂಡುಬಿದಿರೆ, ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಅನಿಲ್ ಕುಮಾರ್, ಪಾಂಜಗುತ್ತು ವಿಜಯ್‌ಕುಮಾರ್ ಶೆಟ್ಟಿ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉದಯ್ ಜಾರ, ಜಾರಂದಾಯ ಸೇವಾ ಸಮಿತಿ ಅಧ್ಯಕ್ಷ ವಿಠ್ಠಲ ಪೂಜಾರಿ ಕುಕ್ಕುದಡಿ, ಸತ್ಯನಾಥ ಸೇವಾಬಳಗ ಅಧ್ಯಕ್ಷ ಸುದರ್ಶನ್ ಸೇರಿದಂತೆ ಸತ್ಯನಾಥ ಸೇವಾಬಳಗದ ಸರ್ವಸದಸ್ಯರು ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.
ಗ್ರಾಮದ ಸಂಘ ಸಂಸ್ಥೆಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.