ಮಂಗಳೂರು: ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ PM SHRI KPS ನಾಲ್ಯಪದವು ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಅರ್ಹತೆ ಗಳಿಸಿದೆ. ಬಾಲಕರ ತಂಡ ರನ್ನರ್ಸ್‌ಅಪ್ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೂ ಆಯ್ಕೆಯಾಗಿದೆ.
ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಮಂಗಳೂರು ದಕ್ಷಿಣ ವಲಯದ ಸಹಯೋಗದಲ್ಲಿ, ಬಬ್ಬುಕಟ್ಟೆ ಸರ್ಕಾರಿ ಪ್ರೌಢಶಾಲೆಯ ಆತಿಥ್ಯದಲ್ಲಿ ಪಂದ್ಯಾಟ ನಡೆಯಿತು.
ಬಾಲಕಿಯರ ತಂಡದಲ್ಲಿ ನಿಶಾ, ಸಮೃದ್ಧಿ, ಸನ್ನಿಧಿ, ಚಿನ್ಮಯಿ, ಒರಿಲಿಯಾ, ಪರಿ ಹಾಗೂ ತನುಶ್ರೀ ಸ್ಥಾನ ಪಡೆದಿದ್ದು, ಬಾಲಕರ ತಂಡದಲ್ಲಿ ಕಾರ್ತಿಕ್, ಲಿಖಿತ್, ಹರ್ಷಿತ್, ಧನುಷ್ ಹಾಗೂ ಸಾಥ್ವಿಕ್ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪಂದ್ಯಾವಳಿಯಲ್ಲಿ ಎರಡೂ ತಂಡಗಳು ಉತ್ತಮ ಕ್ರೀಡಾ ಕೌಶಲ್ಯ, ಶಿಸ್ತು ಹಾಗೂ ತಂಡದ ಸಮನ್ವಯ ಪ್ರದರ್ಶಿಸುವ ಮೂಲಕ ಗಮನ ಸೆಳೆದವು.
ವಿದ್ಯಾರ್ಥಿಗಳ ಸಾಧನೆಯ ಹಿಂದೆ PT ಶಿಕ್ಷಕರಾದ ವಿಲಾಸಿನಿ ಹಾಗೂ ಜಯಪ್ರಕಾಶ್ ಭಟ್ ಅವರ ತರಬೇತಿ ಮತ್ತು ಮಾರ್ಗದರ್ಶನ ಪ್ರಮುಖವಾಗಿತ್ತು. ಶಾಲೆಯ ಹಳೇ ವಿದ್ಯಾರ್ಥಿಗಳಾದ ಪ್ರಥ್ವಿ ಹಾಗೂ ದೀಕ್ಷಿತ್ ವಿಶೇಷ ಸಹಕಾರ ನೀಡಿದರು. ಶಿಕ್ಷಕಿ ದಾಕ್ಷಾಯಿಣಿ ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. SDMC ಸದಸ್ಯರಾದ ನಾಮದೇವ್ ಹಾಗೂ ಪೋಷಕರು ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ನೀಡಿದರು.
ಬಾಲಕಿಯರ ಪ್ರಥಮ ಸ್ಥಾನ ಹಾಗೂ ಬಾಲಕರ ರನ್ನರ್ಸ್‌ಅಪ್ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, SDMC ಸದಸ್ಯರು, ಹಳೇ ವಿದ್ಯಾರ್ಥಿಗಳು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದು, ಜಿಲ್ಲಾಮಟ್ಟದಲ್ಲಿಯೂ ತಂಡಗಳು ಉತ್ತಮ ಪ್ರದರ್ಶನ ನೀಡಲಿ ಎಂದು ಶುಭ ಹಾರೈಸಿದ್ದಾರೆ.
Post a Comment