ಕರ್ಣಾಟಕ ಬ್ಯಾಂಕ್ ನೂತನ ಸಿಇಓ ಹಾಗೂ ಆಡಳಿತ ನಿರ್ದೇಶಕ ರಾಘವೇಂದ್ರ ಭಟ್‌ ಅವರಿಗೆ ಕಲ್ಕೂರ ಪ್ರತಿಷ್ಠಾನದಿಂದ ಅಭಿನಂದನೆ

ಮಂಗಳೂರು : ಕರ್ಣಾಟಕ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ನೂತನ ಆಡಳಿತ ನಿರ್ದೇಶಕ ರಾಘವೇಂದ್ರ ಎಸ್.ಭಟ್ ಅವರನ್ನು ಕಲ್ಕೂರ ಪ್ರತಿಷ್ಠಾನದ ನೇತೃತ್ವದಲ್ಲಿ ಅಭಿನಂದಿಸಲಾಯಿತು.

ಈ ಸಂದರ್ಭ ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ಉದ್ಯಮಿ ಪ್ರಕಾಶ್ ಕಲ್ಪಾವಿ, ಆರೂರು ಆಶಾ ಪ್ರಭಾಕರ ರಾವ್‌, ರಘುನಾಥ ಸೋಮಯಾಜಿ, ಕರ್ಣಾಟಕ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕರುಗಳಾದ ಚಂದ್ರಶೇಖ‌ರ್, ನಿರಂಜನ್ ಕುಮಾರ್, ರಘುರಾಮ ಎಚ್.ಎಸ್, ವಿನಯ್ ಭಟ್ ಪಿ.ಜೆ, ವಿಜಯ ಕುಮಾ‌ರ್ ಪಿ.ಎಚ್, ಶ್ರೀಧರ್ ಎಸ್., ಹಾಗೂ ಚೀಫ್ ಬ್ಯುಸಿನೆಸ್ ಆಫೀಸರ್ ಚಂದ್ರಶೇಖ‌ರ್, ಚೀಫ್ ಆಪರೇಟಿವ್ ಆಫೀಸ‌ರ್ ರಾಜಾ ಬಿ.ಎಸ್. ಮೊದಲಾದವರು ಉಪಸ್ಥಿತರಿದ್ದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಅವರು ಸ್ವಾಗತಿಸಿ ರಾಘವೇಂದ್ರ ಭಟ್ ರವರನ್ನು ಶಾಲು ಹಾಗೂ ಫಲವಸ್ತುಗಳನ್ನಿತ್ತು ಅಭಿನಂದಿಸಿದರು.

Post a Comment

Previous Post Next Post