ಹೊರ ರಾಜ್ಯ ಹಾಗೂ ಅಂತರ್ ಜಿಲ್ಲೆಗಳಲ್ಲಿ ಸುಮಾರು 40ಕ್ಕೂ ಅಧಿಕ ಕಳವು ಪ್ರಕರಣದ ಕುಖ್ಯಾತ ಆರೋಪಿ "ಇತ್ತೆ ಬರ್ಪೆ ಅಬುಬಕ್ಕರ್" ಬಂಧನ ; 5,65,000 ಮೌಲ್ಯದ ಚಿನ್ನಾಭರಣಗಳು ಹಾಗೂ ದ್ವಿಚಕ್ರ ವಾಹನ ವಶ

ಮಂಗಳೂರು : ಹೊರ ರಾಜ್ಯ ಹಾಗೂ ಅಂತರ್ ಜಿಲ್ಲೆಗಳಲ್ಲಿ ಸುಮಾರು 40 ಕ್ಕೂ ಅಧಿಕ ಕಳವು ಪ್ರಕರಣದ ಕುಖ್ಯಾತ ಆರೋಪಿತ "ಇತ್ತೆ ಬರ್ಪೆ ಅಬೂಬಕ್ಕರ್"‌ನನ್ನು ಪೊಲೀಸರು ಬಂಧಿಸಿದ್ದಾರೆ.  ಆರೋಪಿತನಿಂದ ರೂ 5,65,000 ಮೌಲ್ಯದ 56.850 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತೂರು ಎಂಬಲ್ಲಿ  ಅ.2.ರಿಂದ  ಅ.6ರ ಮಧ್ಯದ ಅವಧಿಯಲ್ಲಿ ಬೀಗ ಹಾಕಿದ್ದ ಮನೆಯೊಂದರಲ್ಲಿ ನಡೆದ ಸುಮಾರು 149 ಗ್ರಾಂ ತೂಕದ ಒಟ್ಟು 9,50,000/- ರೂ. ಮೌಲ್ಯದ ಚಿನ್ನಾಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹೊರ ರಾಜ್ಯಗಳಲ್ಲಿ ಹಾಗೂ ಹಲವು ಜಿಲ್ಲೆಗಳಲ್ಲಿ ಸುಮಾರು 40 ಕ್ಕೂ ಅಧಿಕ ಕಳವು ಪ್ರಕರಣದ ಕುಖ್ಯಾತ ಆರೋಪಿತ, ಮಂಗಳೂರು, ಜೋಕಟ್ಟೆ ನಿವಾಸಿ ಅಬುಬಕ್ಕರ್ @ ಅಬ್ದುಲ್ ಖಾದರ್ @ ಇತ್ತೆ ಬರ್ಪೆ ಅಬುಬಕ್ಕರ್ ಎಂಬಾತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಸುಮಾರು 5,65,000 ರೂ. ಬೆಲೆಬಾಳುವ ಒಟ್ಟು 56.850 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ ಮಂಗಳೂರು ಕೊಣಾಜೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು ಮಾಡಿದ 60,000/-ರೂ. ಮೌಲ್ಯದ ದ್ವಿಚಕ್ರ ವಾಹನವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಸದ್ರಿ ಪ್ರಕರಣದಲ್ಲಿ ಬೆಳ್ತಂಗಡಿ ಡಿ.ವೈ.ಎಸ್. ಪಿ. ರೋಹಿಣಿ ಸಿ.ಕೆ. ಮಾರ್ಗದರ್ಶನದಂತೆ, ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ.ಜಿ. ಸುಬ್ಬಾಪೂರ ಮಠ ಹಾಗೂ ತಂಡ, ವೇಣೂರು ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಅಕ್ಷಯ್ ಡವಗಿ, ಓಮನ ಎನ್. ಹಾಗೂ ಎ.ಎಸ್. ಐ. ಗಳಾದ ವೆಂಕಟೇಶ್ ನಾಯ್ಕ, ಬೆನ್ನಿಚ್ಚನ್, ಹೆಚ್.ಸಿ. 4ಕೃಷ್ಣ, ಧರ್ಮಸ್ಥಳ ಠಾಣಾ ಹಚ್.ಸಿ. ಪ್ರಶಾಂತ್, ಪಿ.ಸಿ.  ಚರಣ್, ವೇಣೂರು ಪೊಲೀಸ್ ಠಾಣಾ ಪಿ.ಸಿ. ಬಸವರಾಜ್, ಪಿ.ಸಿ.  ಮೋಹನ್, ಮಪಿಸಿ. ಜಯಶ್ರೀ ಪೂಂಜಾಲಕಟ್ಟೆ ಪೊಲೀಸ್ ಠಾಣಾ ಪಿ.ಸಿ. ರಜಿತ್ ಮಂಗಳೂರು ಜಿಲ್ಲಾ ಗಣಕ ಯಂತ್ರದ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ ಅವರನ್ನು ಒಳಗೊಂಡ ತಂಡ ಕರ್ತವ್ಯ ನಿರ್ವಹಿಸಿರುತ್ತದೆ.

Post a Comment

Previous Post Next Post