ಮಂಗಳೂರು: ಮಂಗಳೂರು–ಬೆಂಗಳೂರು ರೈಲು ಮಾರ್ಗದ ಸುಬ್ರಹ್ಮಣ್ಯ ರೋಡ್–ಸಕಲೇಶಪುರ ಘಾಟ್ ವಿಭಾಗದಲ್ಲಿ ಶನಿವಾರ ರಾತ್ರಿ ಭೂಕುಸಿತ ಸಂಭವಿಸಿರುವ ಪರಿಣಾಮ ರೈಲು ಸಂಚಾರ ಸ್ಥಗಿತಗೊಂಡಿದೆ.
ಹಳಿಯ ಮೇಲೆ ಬಿದ್ದಿರುವ ಕಲ್ಲು ಹಾಗೂ ಮಣ್ಣಿನ ರಾಶಿಯನ್ನು ತೆರವುಗೊಳಿಸುವ ಕಾರ್ಯವನ್ನು ರೈಲ್ವೆ ಇಲಾಖೆ ಕೈಗೊಂಡಿದ್ದು, ಸಂಚಾರವನ್ನು ಶೀಘ್ರ ಪುನರಾರಂಭಿಸಲು ಅಧಿಕಾರಿಗಳು ಮತ್ತು ರಕ್ಷಣಾ ತಂಡಗಳು ಕಾರ್ಯನಿರ್ವಹಿಸುತ್ತಿವೆ.
ಭೂಕುಸಿತದ ಪರಿಣಾಮ ಹಲವು ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವಿವಿಧ ನಿಲ್ದಾಣಗಳಲ್ಲಿ ಸ್ಥಗಿತಗೊಂಡಿದ್ದು, ಕೆಲವು ರೈಲುಗಳ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಭಾಗಶಃ ರದ್ದಾದ ರೈಲುಗಳು :
16585 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಮುರುಡೇಶ್ವರ ಎಕ್ಸ್‌ಪ್ರೆಸ್: ಹಾಸನದಲ್ಲಿ ನಿಲುಗಡೆ, ಹಾಸನ–ಮುರುಡೇಶ್ವರ ನಡುವೆ ಸೇವೆ ರದ್ದು.
16511 ಕೆಎಸ್‌ಆರ್ ಬೆಂಗಳೂರು–ಕೋಝಿಕ್ಕೋಡ್ ಎಕ್ಸ್‌ಪ್ರೆಸ್: ಹಾಸನದಲ್ಲಿ ನಿಲುಗಡೆ, ಹಾಸನ–ಕೋಝಿಕ್ಕೋಡ್ ನಡುವೆ ಸೇವೆ ರದ್ದು.
17377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್: ಹಾಸನದಲ್ಲಿ ನಿಲುಗಡೆ, ಹಾಸನ–ಮಂಗಳೂರು ಸೆಂಟ್ರಲ್ ನಡುವೆ ಸೇವೆ ರದ್ದು.
16595 ಬೆಂಗಳೂರು–ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್: ಸಕಲೇಶಪುರದಲ್ಲಿ ನಿಲುಗಡೆ, ಸಕಲೇಶಪುರ–ಕಾರವಾರ ನಡುವೆ ಸೇವೆ ರದ್ದು.
16586 ಮುರುಡೇಶ್ವರ–ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್: ಸುಬ್ರಹ್ಮಣ್ಯ ರೋಡ್‌ನಲ್ಲಿ ನಿಲುಗಡೆ, ಸುಬ್ರಹ್ಮಣ್ಯ ರೋಡ್–ಬೆಂಗಳೂರು ನಡುವೆ ಸೇವೆ ರದ್ದು.
16512 ಕೋಝಿಕ್ಕೋಡ್–ಬೆಂಗಳೂರು ಎಕ್ಸ್‌ಪ್ರೆಸ್: ಪುತ್ತೂರುದಲ್ಲಿ ನಿಲುಗಡೆ, ಪುತ್ತೂರು–ಬೆಂಗಳೂರು ನಡುವೆ ಸೇವೆ ರದ್ದು.
17378 ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್‌ಪ್ರೆಸ್: ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ನಿಲುಗಡೆ.
ಸಂಪೂರ್ಣ ರದ್ದಾದ ರೈಲುಗಳು :
16540 ಮಂಗಳೂರು ಜಂಕ್ಷನ್–ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (ಭಾನುವಾರ ಸೇವೆ) – ಸಂಪೂರ್ಣ ರದ್ದು.
16575 ಯಶವಂತಪುರ–ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್ (ಇಂದು) – ಸಂಪೂರ್ಣ ರದ್ದು.
ರೈಲು ಸಂಚಾರ ಪುನರಾರಂಭದ ಕುರಿತು ರೈಲ್ವೆ ಇಲಾಖೆ ಶೀಘ್ರದಲ್ಲೇ ಮುಂದಿನ ಮಾಹಿತಿ ಪ್ರಕಟಿಸುವ ಸಾಧ್ಯತೆಯಿದೆ. ಪ್ರಯಾಣಿಕರು ತಮ್ಮ ರೈಲುಗಳ ನವೀಕೃತ ಮಾಹಿತಿಗಾಗಿ ರೈಲ್ವೆಯ ಅಧಿಕೃತ ಮಾಹಿತಿ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.
Post a Comment