ಕೊಡಗು : ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಜಗಳ ; ಆನೆಯಡಿಗೆ ಸಿಲುಕಿ ಪ್ರವಾಸಿ ಮಹಿಳೆ ಸಾವು

ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ದುರ್ಘಟನೆಯಲ್ಲಿ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಚೆನ್ನೈನ ಪಲ್ಲಾವರಂನಿಂದ ಪ್ರವಾಸಕ್ಕೆ ಬಂದಿದ್ದ ತಂಡದ ಸದಸ್ಯೆ ಜಿಣ್ಣು (33) ಅವರು ಎಲಿಫೆಂಟ್ ಬಾಥಿಂಗ್ ವೀಕ್ಷಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಎರಡು ಆನೆಗಳ ನಡುವೆ ನಡೆದ ಜಗಳದಲ್ಲಿ ಆನೆಯಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಅವರ ಪತಿ ಜೋಯಲ್ ಅವರೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Post a Comment

Previous Post Next Post