ಜಬಲ್ಪುರ ನರ್ಮದಾ ನದಿಯಲ್ಲಿ ದೋಣಿ ದುರಂತ: ನಾಲ್ವರು ಸಾವು, ಹಲವರು ಕಾಣೆಯಾಗಿರುವ ಶಂಕೆ

ಮಧ್ಯಪ್ರದೇಶದ ಜಬಲ್ಪುರ ಸಮೀಪದ ನರ್ಮದಾ ನದಿಯಲ್ಲಿ ಗುರುವಾರ ಸಂಜೆ ಭೀಕರ ದೋಣಿ ದುರಂತ ಸಂಭವಿಸಿದೆ. ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ಕ್ರೂಸ್ ಬೋಟ್ ಮುಳುಗಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಹಲವರು ಕಾಣೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯು ಬಾರ್ಗಿ ಅಣೆಕಟ್ಟು ಹಿನ್ನೀರಿನ ಖಮರಿಯಾ ದ್ವೀಪದ ಬಳಿ ನಡೆದಿದೆ. ದೋಣಿಯಲ್ಲಿ 30ಕ್ಕೂ ಹೆಚ್ಚು ಪ್ರವಾಸಿಗರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯಂತೆ, ಅಕಸ್ಮಿಕವಾಗಿ ಬೀಸಿದ ತೀವ್ರ ಬಿರುಗಾಳಿ ಮತ್ತು ಸಾಮರ್ಥ್ಯ ಮೀರಿದ ಪ್ರಯಾಣಿಕರ ಸಂಖ್ಯೆಯಿಂದ ದೋಣಿ ಸಮತೋಲನ ಕಳೆದುಕೊಂಡು ಮಗುಚಿಬಿದ್ದಿದೆ.

ರಾಜ್ಯದ ವಿಪತ್ತು ನಿರ್ವಹಣಾ ಪಡೆ State Disaster Response Force (SDRF) ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಇದುವರೆಗೆ 15 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಇನ್ನೂ ಕೆಲವರು ಕಾಣೆಯಾಗಿರುವ ಸಾಧ್ಯತೆ ಇರುವುದರಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ.

Post a Comment

Previous Post Next Post