ರೌಡಿ ಶೀಟರ್ ಟ್ಯಾಬ್ಲೆಟ್ ಆರಿಫ್ ಕೊಲೆ ಪ್ರಕರಣ: ಮೂವರು ಆರೋಪಿಗಳು ಸಿಸಿಬಿ ವಶಕ್ಕೆ, ಆರು ಮಂದಿಯ ಪಾತ್ರ ಬೆಳಕಿಗೆ

ಮಂಗಳೂರು: ತೊಕ್ಕೊಟ್ಟಿನಲ್ಲಿ ರೌಡಿಶೀಟರ್ “ಟ್ಯಾಬ್ಲೆಟ್ ಆರಿಫ್” ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಂಧಿತ ಆರೋಪಿಗಳನ್ನು ಮೂಡುಶೆಡ್ಡೆಯ ರಿಝ್ವಾನ್ ಹಾಗೂ ಫೈಸಲ್ ನಗರದ ಇಬ್ಬರು ಯುವಕರು ಎಂದು ತಿಳಿದುಬಂದಿದೆ. ಆರೋಪಿಗಳನ್ನು ನಿಗೂಢ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಕೊಲೆಯಲ್ಲಿ ಒಟ್ಟು ಆರು ಮಂದಿ ನೇರವಾಗಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ತನಿಖೆ ವೇಳೆ ಕೃತ್ಯಕ್ಕೆ ಬಳಸಲಾಗಿದ್ದ ಇನೋವಾ ಕಾರನ್ನು ವಿಟ್ಲ ಸಮೀಪದ ಬುಡೋಳಿ ಪ್ರದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ನಂತರ ಆರೋಪಿಗಳು ಮೈಸೂರು ಮತ್ತು ಬೆಂಗಳೂರು ಕಡೆಗೆ ಪರಾರಿಯಾಗಿದ್ದರು ಎಂಬ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.
Previous Post Next Post