Top News

ಶೃಂಗೇರಿ : ವರನ ಮೇಲೆ ರೇಪ್ ಪ್ರಕರಣ ಬಹಿರಂಗ ; ಮಂಟಪದಲ್ಲೇ ಮದುವೆ ನಿರಾಕರಿಸಿದ ವಧು

ಬಾಳೆಹೊನ್ನೂರು ಮೂಲದ ಯುವತಿ ಹಾಗೂ ಶೃಂಗೇರಿ ಪಟ್ಟಣದ ದೀಕ್ಷಿತ್ ನಡುವೆ ಮದುವೆ ನಿಗದಿಯಾಗಿದ್ದು, ಶೃಂಗೇರಿ ಪಟ್ಟಣದಲ್ಲಿರುವ ಈಡಿಗರ ಸಮುದಾಯ ಭವನದಲ್ಲಿ ಅದ್ಧೂರಿಯಾಗಿ ಮದುವೆ ಸಿದ್ಧತೆಗಳನ್ನು ಮಾಡಲಾಗಿತ್ತು.

ಆದರೆ ಮದುವೆ ಮಂಟಪಕ್ಕೆ ಆಗಮಿಸಿದ ವಧು, ವರನ ವಿರುದ್ಧ ಅತ್ಯಾಚಾರ (ರೇಪ್) ಪ್ರಕರಣ ದಾಖಲಾಗಿರುವ ಮಾಹಿತಿ ತಿಳಿದು ಮದುವೆಗೆ ನಿರಾಕರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ದೀಕ್ಷಿತ್ ಅವರನ್ನು ಮದುವೆಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ವಧು ಮಂಟಪದಿಂದಲೇ ವಾಪಸ್ ಆಗಿದ್ದಾಳೆ.

ಈ ಘಟನೆ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

Post a Comment

Previous Post Next Post