ಬೆಂಗಳೂರು : ಕರ್ನಾಟಕ ಸರ್ಕಾರವು ರಾಜ್ಯದ ವಾಹನ ಸವಾರರಿಗೆ ದೊಡ್ಡ ರಿಯಾಯಿತಿಯ ಶುಭಸುದ್ದಿಯನ್ನು ನೀಡಿದ್ದು, ಬಾಕಿ ಇರುವ ಟ್ರಾಫಿಕ್ ದಂಡದ ಮೇಲೆ ಶೇ.50 ರಷ್ಟು ರಿಯಾಯಿತಿ ಘೋಷಿಸಿದೆ.
ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಅವರು ನ. 20ರಂದು ಅಧಿಕೃತ ಆದೇಶ ಬಿಡುಗಡೆ ಮಾಡಿದ್ದಾರೆ. ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಸರ್ಕಾರ ತಕ್ಷಣ ಜಾರಿಗೆ ತರಲು ಒಪ್ಪಿಗೆ ನೀಡಿದ್ದು, ನವೆಂಬರ್ 21ರಿಂದ ಡಿಸೆಂಬರ್ 12ರವರೆಗೆ ರಾಜ್ಯದಾದ್ಯಂತ ಈ ರಿಯಾಯಿತಿ ಲಭ್ಯವಿರಲಿದೆ.
ಹಿಂದೆ ಇದೇ ರೀತಿಯ ರಿಯಾಯಿತಿಯಿಂದ ಸರ್ಕಾರಕ್ಕೆ ಕೋಟ್ಯಾಂತರ ಆದಾಯ ಬಂದ ಹಿನ್ನೆಲೆ ಮತ್ತೆ ಈ ಅವಕಾಶ ಕಲ್ಪಿಸಲಾಗಿದೆ. ಸವಾರರು ನಿಗದಿತ ಅವಧಿಯೊಳಗೆ ತಮ್ಮ ಬಾಕಿ ದಂಡಗಳನ್ನು ಅರ್ಧ ಮೊತ್ತದಲ್ಲಿ ಪಾವತಿಸಬಹುದಾಗಿದೆ.
Post a Comment