ಕಿನ್ನಿಕಂಬಳ ರೋಸಾ ಮಿಸ್ತಿಕಾ ಶಾಲೆಯಲ್ಲಿ ಪೊಯೆಟಿಕಾ ಕವಿಗೋಷ್ಠಿ44 ಹಾಗೂ ಶಾಲಾ ಮಕ್ಕಳಿಗೆ ಉಚಿತ ಶೂ ಸಾಕ್ಸ್ ಮತ್ತು ಆಟಿಕೆಗಳ ವಿತರಣೆ

ಮಂಗಳೂರು: ಪೊಯೆಟಿಕಾ ಬಳಗದ ವತಿಯಿಂದ ಪೊಯೆಟಿಕಾ ೪೪ನೇ ಕವಿಗೋಷ್ಠಿ ಹಾಗೂ ಶಾಲಾ ಮಕ್ಕಳಿಗೆ ಉಚಿತ ಶೂ ಸಾಕ್ಸ್ ಮತ್ತು ಆಟಿಕೆಗಳ ವಿತರಣೆ ಕಾರ್ಯಕ್ರಮ ಬುಧವಾರ ಕಿನ್ನಿಕಂಬಳ ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಮಂಗಳೂರು ಧರ್ಮಪ್ರಾಂಥದ ಪ್ರಾವಿನ್ಶಿಯಲ್ ಸುಪೀರಿಯರ್ ಭಗಿನಿ ಲಿಲ್ಲಿ ಪಿರೇರಾ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಳೀಯ ರೋಸಾ ಮಿಸ್ತಿಕಾ ಸಂಸ್ಠೆಯ ಮುಖ್ಯಸ್ಥರಾದ ಭಗಿನಿ ಲೀನಾ ಪಿರೇರಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಪೊಯೆಟಿಕಾ ಮುಖ್ಯಸ್ಥ ನವೀನ್ ಪಿರೇರಾ ಸುರತ್ಕಲ್ ಅವರನ್ನು ಸನ್ಮಾನಿಸಲಾಯಿತು.  ಶಾಲಾ ಸಂಚಾಲಕರಾದ ಭಗಿನಿ ರೋಸ್ ಲೀಟಾ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ನಮಿತಾ ಎಸ್. ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಭಗಿನಿ ವೀಣಾ ಅರಾನ್ಹಾ,, ಗಣೇಶ್ ಅದ್ಯಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಐರಿನ್ ಮೆಂಡೋನ್ಸಾ ಕಾಸ್ಸಿಯಾ, ಸಬಿತಾ ಫೆರ್ನಾಂಡಿಸ್ ದೆರೆಬೈಲ್, ಜಸಿಂತಾ ಮಸ್ಕರೇನ್ಹಸ್ ದೆರೆಬೈಲ್, ಎಡ್ವರ್ಡ್ ಲೋಬೊ ತೊಕ್ಕೊಟ್ಟು ಹಾಗೂ  ನವೀನ್ ಪಿರೇರಾ ಸುರತ್ಕಲ್ ಕವಿತೆಗಳನ್ನು ವಾಚಿಸಿದರು. ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಎಡ್ವರ್ಡ್ ಲೋಬೊ ತೊಕ್ಕೊಟ್ಟು ಮಿಮಿಕ್ರಿ ಪ್ರಸ್ತುತಪಡಿಸಿದರು. ಶಿಕ್ಷಕಿ ಪ್ರೀತಾ ಲೋಬೊ ನಿರೂಪಿಸಿದರು. ಪೂರ್ಣಿಮಾ ಸ್ವಾಗತಿಸಿದರು. ಭಗಿನಿ ನವನೀತಾ ವಂದಿಸಿದರು.

Post a Comment

Previous Post Next Post