DelhiCarBlast : ಕೆಂಪು ಕೋಟೆ ಸಮೀಪದಲ್ಲಿಯೇ ಭೀಕರ ಕಾರು ಸ್ಫೋಟ ; 8ಕ್ಕೂ ಅಧಿಕ ಸಾವು, ಛಿದ್ರ ಛಿದ್ರಗೊಂಡ ದೇಹಗಳು !

ದೆಹಲಿಯ ಐತಿಹಾಸಿಕ ಕೆಂಪು ಕೋಟೆ (ಲಾಲ್ ಕಿಲಾ) ಬಳಿಯಲ್ಲಿ ಸೋಮವಾರ ಸಂಜೆ ನಡೆದ ಭಾರಿ ಕಾರು ಸ್ಫೋಟದಲ್ಲಿ 8 ಮಂದಿ ಮೃತಪಟ್ಟಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಂಜೆ 6.55ರ ಸಮಯದಲ್ಲಿ ಚಾಂದನಿ ಚೌಕ್–ಲಾಲ್ ಕಿಲಾ ಪ್ರದೇಶದ ಕಾರು ಅಚಾನಕ್ ಸ್ಫೋಟಗೊಂಡಿದ್ದು, ಈ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡು ಸುತ್ತಲೂ ಇದ್ದ 3–6 ಕಾರುಗಳು ಮತ್ತು 3 ಆಟೋಗಳು ಉರಿದವು. ಹಲವು ದೇಹಗಳು ಛಿದ್ರ ಛಿದ್ರವಾಗಿರುವುದು ಪೊಲೀಸರು ದೃಢಪಡಿಸಿದ್ದಾರೆ.

ಘಟನೆಗೆ ಕಾರಣ ಏನೆಂದು ಸ್ಪಷ್ಟವಾಗಿಲ್ಲ. ದೇಶಾದ್ಯಂತ 2,900 ಕೆಜಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡ ಬಳಿಕ  ಈ ಘಟನೆ ನಡೆದಿರುವುದು ಆತಂಕವನ್ನು ಹುಟ್ಟುಹಾಕಿದೆ.  7 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಜನಸಂದಣಿಯಿಂದ ತುಂಬಿರುವ ಕೆಂಪು ಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಷಾದದ ವಾತಾವರಣ ನಿರ್ಮಾಣಗೊಂಡಿದೆ.  ಸ್ಥಳಕ್ಕೆ ಭಾರತದ ನೆಷನಲ್ ಸೆಕ್ಯುರಿಟಿ ಗಾರ್ಡ್ (NSG) ಮತ್ತು ನೆಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (NIA) ತಂಡಗಳು ಭೇಟಿ ನೀಡಿ ಪರಿಶೀಲನೆ ಪ್ರಾರಂಭಿಸಿದ್ದಾರೆ.

ಘಟನೆಯ ತಕ್ಷಣ ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಅನೇಕ ಪ್ರಮುಖ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

Post a Comment

Previous Post Next Post