ಆಸ್ತಿಗಾಗಿ ತಾಯಿಯನ್ನೇ ಕೊಂದ ಪಾಪಿ ಮಗಳು — ಎನ್.ಆರ್.ಪುರ ತಾಲೂಕಿನ ಬಂಡಿಮಠದಲ್ಲಿ ಘಟನೆ


ಎನ್.ಆರ್.ಪುರ ತಾಲೂಕಿನ ಬಂಡಿಮಠ ಗ್ರಾಮದಲ್ಲಿ ಆಸ್ತಿಗಾಗಿ ನಡೆದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಒಂದೂವರೆ ಎಕರೆ ಜಮೀನು ಹಾಗೂ ಮನೆಗಾಗಿ ತನ್ನ ತಾಯಿಯನ್ನೇ ಕೊಲೆಗೈದಿದ್ದಾಳೆ ಎಂಬ ಆರೋಪ ಮಗಳ ಮೇಲೆ ಕೇಳಿಬಂದಿದೆ.

ಕುಸುಮ (62) ಎಂಬವರು ದುಃಖಕರವಾಗಿ ಮಗಳಿಂದಲೇ ಕೊಲೆಯಾದ ನತದೃಷ್ಟ ತಾಯಿ.
ಸುಧಾ (35) ಎಂಬ ಆಕೆ ಆಸ್ತಿಗಾಗಿ ತಾಯಿಯನ್ನು ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ತಾಯಿ ರಾತ್ರಿ ಮಲಗಿದ್ದಾಗ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ದೂರಲಾಗಿದೆ.
ಈ ಕುಟುಂಬವು ಕೂಲಿಗಾಗಿ ಬೇರೆ ಊರಿನಿಂದ ಬಂದು ಬಂಡಿಮಠದಲ್ಲಿ ವಾಸಿಸುತ್ತಿತ್ತು ಎಂದು ಮಾಹಿತಿ ಲಭ್ಯವಾಗಿದೆ.

ಊರಿನಲ್ಲಿರುವ ಆಸ್ತಿ ತನ್ನ ಕೈತಪ್ಪಬಹುದು ಎಂಬ ಆತಂಕದಿಂದಲೇ ಮಗಳು ಈ ಕೃತ್ಯ ಎಸಗಿದಾಳೆ ಎಂದು ಶಂಕಿಸಲಾಗಿದೆ.
ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Post a Comment

Previous Post Next Post