ಇಹಲೋಕ ತ್ಯಜಿಸಿದ ಪರಿಸರ ಮಾತೆ ; ಶತಾಯುಷಿ ಸಾಲುಮರ ತಿಮ್ಮಕ್ಕ ಇನ್ನಿಲ್ಲ

ಪರಿಸರ ಸಂರಕ್ಷಣೆಗಾಗಿ ವಿಶ್ವವಿಖ್ಯಾತರಾಗಿದ್ದ ‘ವೃಕ್ಷಮಾತೆ’ ಸಾಲುಮರ ತಿಮ್ಮಕ್ಕ (114) ಇಂದು ವಿಧಿವಶರಾದರು. ಪದ್ಮಶ್ರೀ ಪುರಸ್ಕೃತೆಯಾದ ತಿಮ್ಮಕ್ಕ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗಾಗಿ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ 12 ಗಂಟೆಗೆ ಕೊನೆಯುಸಿರೆಳೆದರು.

1911ರ ಜೂನ್ 30ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ಜನಿಸಿದ್ದ ತಿಮ್ಮಕ್ಕ ಅವರು ಪರಿಸರ ಪ್ರೇಮಿಗಳ ಹೃದಯದಲ್ಲಿ “ವೃಕ್ಷಮಾತೆ”ವಾಗಿ ನೆಲೆಸಿದ್ದರು. ಪತಿ ಚಿಕ್ಕಯ್ಯರೊಂದಿಗೆ ಮಕ್ಕಳಿಲ್ಲದ ದುಃಖವನ್ನು ಮರೆಯಲು ರಸ್ತೆ ಬದಿಯಲ್ಲಿ ಆಲದ ಗಿಡಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಸಾಕಿ ಬೆಳೆಸಿದ ಅವರು ನಂತರ ‘ಸಾಲುಮರದ ತಿಮ್ಮಕ್ಕ’ ಎಂದು ಪ್ರಸಿದ್ಧರಾದರು.

ಪರಿಸರ ಕಾಳಜಿಗೆ ನೀಡಿದ ಅವರು ಮಾಡಿದ ಮಹತ್ತರ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿತ್ತು. ಪ್ರಕೃತಿ ಪ್ರೇಮಿಗಳಾದ ಲಕ್ಷಾಂತರ ಜನರಿಗೆ ತಿಮ್ಮಕ್ಕ ಅವರ ಜೀವನವೇ ಸ್ಫೂರ್ತಿಯಾದದ್ದು ನಿಸ್ಸಂದೇಹ.

Post a Comment

Previous Post Next Post